ಹೂವಿನ ಹಡಗಲಿ

ಶಿಕ್ಷಕ ವೃತ್ತಿ ಪವಿತ್ರವಾದದ್ದು -ತಹಶೀಲ್ದಾರ್ ಅಂಬರೀಷ್

ಶಿಕ್ಷಕ ವೃತ್ತಿ ಪವಿತ್ರವಾದದ್ದು -ತಹಶೀಲ್ದಾರ್ ಅಂಬರೀಷ್

ಹೂವಿನ ಹಡಗಲಿ  01 : ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ತಹಶೀಲ್ದಾರ್ ಅಂಬರೀಷ್ ಹೇಳಿದರು.ಪಟ್ಟಣದ ಜಿ ಪಿ ಜಿ ಪ್ರೌಢಶಾಲೆಯಲ್ಲಿ ಬುಧವಾರ ಜಿ ಪಿ ಜಿ ಪ್ರೌಢಶಾಲೆಯ ಶಿಕ್ಷಕ ಸಿಬ್ಬಂದಿ ಮತ್ತು ಎಸ್ ಡಿ ಎಂ ಸಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪಿ ಪ್ರಕಾಶ್ ಸೇವಾ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಿ ಪ್ರಕಾಶ್ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಕೈಗನ್ನಡಿ. ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದು.ಜಾಲಹಾಳ, ಮಾಗಳ, ಬ್ಯಾಲಹುಣಸಿ ಗ್ರಾಮಾಂತರ ಪ್ರದೇಶದಲ್ಲಿ ತಮ್ಮ ವೃತ್ತಿಯ ಬಹುಪಾಲು ವರ್ಷಗಳ ಸೇವೆಯನ್ನು ಸ್ಮರಿಸಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಗುರುಗಳ ಆದರ್ಶಗಳು ವಿದ್ಯಾರ್ಥಿಗಳಿಗೆ ದಾರೀದೀಪ ಇದ್ದಹಾಗೆ. ಆಧುನಿಕತೆಯ ಭರಾಟೆಯಲ್ಲಿ ನೀರಸವಾಗದಂತೆ ಮಕ್ಕಳಿಗೆ ಆಕರ್ಷಕವಾಗಿ ಬೋಧಿಸಿರಿ ಎಂದರು.ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ, ಬ್ಯಾಲಹುಣಸಿ ಬಸವನಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ ಪಿ ಎಂ ಅಶೋಕ್, ಪ್ರಾಚಾರ್ಯರಾದ ಎ ಕೊಟ್ರಗೌಡ ಮಾತನಾಡಿದರು.ಪಿ ಪ್ರಕಾಶ್ ಮೊದಲ ಬಾರಿಗೆ ಸೇವೆಗೆ ಸೇರಿದ್ದ ಜಾಲಿಹಾಳನ ಅಂದಿನ ಶಿಷ್ಯಂದಿರು ತಮ್ಮ ಅನಿಸಿಕೆಗಳನ್ನು ತಿಳಿಸಿದರು.ತಾಲೂಕು ಪ್ರಾಥಮಿಕ, ಪ್ರೌಢಶಾಲೆ, ಸರ್ಕಾರಿ ನೌಕರರ ಸಂಘ, ಬಿಇಒ, ಬಿ ಆರ್ ಸಿ ಕಚೇರಿ,ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸೇವಾ ನಿವೃತ್ತಿ ಹೊಂದಿದ ಪಿ ಪ್ರಕಾಶ್ ರವರನ್ನುಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನಿತ ಪಿ ಪ್ರಕಾಶ್ ತಮ್ಮ ವೃತ್ತಿಯ ಪಯಣದ ಹಾದಿಯ ಅನುಭವಗಳನ್ನು ಹಂಚಿಕೊಂಡರು.ಟಿ ಪಿ ಒ ರಫೀಕ್ ಅಹಮದ್ ಖವಾಸ್, ಜಿ ಎಂ ಕಾಂತೇಶ್, ವಿ ಬಿ ಜಗದೀಶ್, ಎ.ಎಂ.ಪಿ.ವಾಗೀಶ್‌.  ಸರ್ವಮಂಗಳ ಇತರರು ಉಪಸ್ಥಿತರಿದ್ದರು.ಕೋರಿ ವಿಶ್ವನಾಥ್, ಎಲ್ ಖಾದರಬಾಷಾ, ಗಡ್ಡಿ ಆನಂದ,ಹೆಚ್ ಕಾಂತೇಶ್ ನಿರ್ವಹಿಸಿದರು 


ಸುದ್ದಿ ಓದಿ