ಶಿಕ್ಷಕರು ನಿರಂತರ ಅಧ್ಯಯನಶೀಲರಾಗಬೇಕು : ಹೇಮಣ್ಣ
ಲೋಕದರ್ಶನ ವರದಿ
ರಾಣೇಬೆನ್ನೂರು 10: ಇಲ್ಲಿನ ಮೃತುಂಜಯ ನಗರದ ಪೂರ್ವ ಬಡಾವಣೆ ಶಾಸಕರ ಸಕರ್ಾರಿ ಹಿರಿಯ ಪ್ರಾ ಶಾಲೆಯಲ್ಲಿ, ಡಾ: ಸರ್ವಪಲ್ಲಿ ರಾಧಾಕೃಷ್ಣನ್ರವರ, 135ನೇ ಜನ್ಮದಿನೋತ್ಸವದ, ಶಿಕ್ಷಕರ ದಿನಾಚರಣೆ ಸಮಾರಂಭವು ಇತ್ತೀಚೆಗೆ ನಡೆಯಿತು. ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಹಾವೇರಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಹೇಮಣ್ಣ ಸಿ ಮೂಡಬಾಗಿಲ, ಸರಕಾರಿ ಉನ್ನತೀಕರಿಸಿದ ಹಿಪ್ರಾಶಾ ನಂ.7 ಶಾಲೆಯ ಶಿಕ್ಷಕಿ ಶೋಭಾ ಬಿ, ಮತ್ತು ಸಿಆರ್ಪಿಕೆಸಿ ಬಾತಿ ಅವರನ್ನು ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷ ಸರ್ವ ಸದಸ್ಯರು ಅಭಿನಂದಿಸಿ ಸನ್ಮಾನಿಸಿದರು.
ಮಾತನಾಡಿದ ಶಿಕ್ಷಕ ಹೇಮಣ್ಣ ಹಾಗೂ ಶೋಭಾ ಅವರು ಯಾವುದೇ ಫಲಾಪೇಕ್ಷೆಯಿಲ್ಲದೆ ನಿರಂತರವಾಗಿ ಶಿಕ್ಷಕರು ತಮ್ಮ ಕಾರ್ಯದಲ್ಲಿ ತೊಡಗಿ ಮಗುವಿನ ಜೊತೆಯಲ್ಲಿ ಮಗುವಾಗಿ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಉತ್ತಮ ಸಮಾಜ ನಿರ್ಮಾಣ ಶಿಕ್ಷರ ಕೈಯಲ್ಲಿದೆ ನಿರಂತರ ಅಧ್ಯಯನ ನಮ್ಮ ಪ್ರವೃತ್ತಿಯಾಗಬೇಕೆಂದರು. ಎಸ್ಡಿಎಂಸಿ ಅಧ್ಯಕ್ಷ ಮಂಜುಳಾ ಅದ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೃಷ್ಣಕುಮಾರ್ ಮಾನೆ, ಮೌನೇಶ್ ನಾಗನಗೌಡ್ರ ಸೇರಿದಂತೆ ಮತ್ತೆ ಇತರ ಗಣ್ಯರು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಶಿಕ್ಷಕರು ಉಪಸ್ಥಿತರಿದ್ದರು. ಪ್ರಧಾನ ಗುರುಮಾತೆ ನಿರ್ಮಲ ಮಾನೆ ಪ್ರಾಸ್ತಾವಿಕ ಮಾತನಾಡಿದರು. ನವೀನ್ ಎಂ ಸ್ವಾಗತಿಸಿದರು. ಎಸ್ ಎಸ್ ಮರ್ತಾಳ. ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ವನಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಗಂಗಾ ವಂದಿಸಿದರು.