ಶಿಕ್ಷಕರು ದೇಶದ ಸಂಪತ್ತು ವೃತ್ತಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು: ಪ್ರಕಾಶ ಕೋಳಿವಾಡ
ರಾಣೇಬೆನ್ನೂರ 23: ಸಮಾಜಕ್ಕೆ ದಾರೀದೀಪವಾಗಿರುವ ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಅದನ್ನು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಶಿಕ್ಷಕ ಹುದ್ದೆಗೆ ಚ್ಯುತಿ ಬರದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ರವಿವಾರ ದಂದು ಸ್ಥಳೀಯ ಶಿಕ್ಷಕರ ಸಹಕಾರಿ ಸಂಘದ ಸಭಾಭವನದಲ್ಲಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕರ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಪ್ರಯುಕ್ತ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಹಕಾರಿ ಸಂಘದ ಸದಸ್ಯರ ಮಕ್ಕಳಿಗೆ ಏರಿ್ಡಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಒಬ್ಬ ವೈದ್ಯ ನಿರ್ಲಕ್ಷಿಸಿದರೆ ರೋಗಿಯ ಜೀವ ಆಪತ್ತಿಗೆ ಸಿಲುಕಬಹುದು, ಓರ್ವ ಇಂಜಿನಿಯರ್ ಬೇ ಜವಾಬ್ದಾರಿ ವಹಿಸಿದರೆ ಅವಗಡ ಸಂಭವಿಸಬಹುದು. ಆದರೆ ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ಬೇಜವಾಬ್ದಾರಿ, ಅಲಕ್ಷ ಮಾಡಿದರೆ ಮಕ್ಕಳ ಭವಿಷ್ಯ ಹಾಳಾಗುವುದರ ಮೂಲಕ ಸಮಾಜದ ವ್ಯವಸ್ಥೆ ಅಯೋಮಯವಾಗುತ್ತದೆ ಎಂಬುದನ್ನು ಶಿಕ್ಷಕರು ಮನಗಾಣಬೇಕು ಎಂದರು.
ಭಾರತದಲ್ಲಿ ಶಿಕ್ಷಕರುಗಳನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜ್ಯ ಭಾವನೆಯಿಂದ ಕಾಣುವ ಜನರಿದ್ದಾರೆ. ಅಂತಹ ಜವಾಬ್ದಾರಿ ಇರುವ ಶಿಕ್ಷಕರು ಕರ್ತವ್ಯದಲ್ಲಿ ನಿರ್ಲಕ್ಷ ತೋರಬಾರದು ಎಂದರು. ಮುಂಬರುವ ದಿನಮಾನಗಳಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ನಂತರ ಮುಂದೇನು..? ಎಂಬುದರ ಬಗ್ಗೆ ಪಿಕೆಕೆಯಿಂದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದಾಗಿ ಕೋಳಿವಾಡ್ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾಗನಗೌಡ ಎಸ್. ರಾಮನಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಇಓ ಶ್ಯಾಮಸುಂದರ ಅಡಿಗ, ಸಮನ್ವಯಾಧಿಕಾರಿ ಮಂಜುನಾಯ್ಕ, ಅ.ದಾ.ಸ.ನಿ ಸಿವಿ ಅಡಿವೇರ, ಸಹಕಾರಿ ಸಂಘದ ಉಪಾಧ್ಯಕ್ಷ ನಾಗರತ್ನ ಬಿ. ಹಂಚಿನಮನಿ, ನಿರ್ಧೇಶಕರುಗಳಾದ ಎಸ್. ವಿ. ದೊಡ್ಡಮನಿ, ಡಿ. ವಿ. ಜೀವನಗೌಡ್ರ, ಎಂ. ಎ. ದಾರುಗಾರ, ಅನ್ನಪೂರ್ಣ ಎನ್. ಬಣಕಾರ, ರಾಜಕುಮಾರ ಎಮ್ಮೇರ, ಆನಂದ ಎಸ್. ಏಳಕುರಿ, ಗೀತಾ ಅಜ್ಜವಡಿಮಠ, ರಾಘವೇಂದ್ರ ದೇಸಾಯಿ, ಕೆ. ಎಚ್. ತಾವರಗೊಂದಿ, ಪಿ. ಕೆ. ಗಿಡ್ಡಪ್ಪಳವರ ಶಿಕ್ಷಕ ಮುಖಂಡರಾದ ಎನ್.ಎಂ ಚವಡಣ್ಣನವರ, ಬಿ.ಪಿ. ಶಿಡೇನೂರ, ರಮೇಶ ಎಳೇಹೊಳಿ, ಲಕ್ಷ್ಮಣ ತೋಟದ, ಎಸ್ ಕೆ ಹೇಮಂತ, ಎಂ.ಕೆ. ಸಾಲಿಮಠ ಸೇರಿದಂತೆ ವಿವಿಧ ಶಿಕ್ಷಕ ಶಿಕ್ಷಕಿಯರ ಸಂಘಟನೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಶಿಕ್ಷಕರು ಮತ್ತಿತರರು ಇದ್ದರು. ಅನೂಸೊಯಾ ರಾಥೋಡ್ ಪ್ರಾರ್ಥಿಸಿದರು. ರಾಘವೇಂದ್ರ ದೇಸಾಯಿ ಸ್ವಾಗತಿಸಿ, ಎಮ್ ಸಿ ಬಲ್ಲೂರ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ವಿ. ಕಾಟಣ್ಣನವರ್ ನಿರೂಪಿಸಿ, ಎಸ್.ಜಿ. ಮಾಕಾಳ ವಂದಿಸಿದರು.