ಹಳೆಯ ನಿಶ್ಚಿತ ಪಿಂಚಣಿ ಜಾರಿಗೆ ಶಿಕ್ಷಕರಿಂದ ಮನವಿ
ಅಥಣಿ 05: 2005-06ನೇ ಸಾಲಿನ ನೇಮಕಾತಿ ಆದೇಶದನ್ವಯ 2007ರಲ್ಲಿ ನೇಮಕ ಹೊಂದಿದ ಪ್ರಾಥಮಿಕ ಶಾಲಾ ಶಿಕ್ಷಕಕರಿಗೆ ಸಂಬಂಧಿಸಿದ ನ್ಯಾಯಾಲಯದ ವ್ಯಾಜ್ಯಗಳಿಂದ ವಿಳಂಬವಾಗಿರುವ ಪ್ರಕರಣಗಳಿಗೆ ಹಳೆ ಪಿಂಚಣಿ ಸೌಲಭ್ಯ ನೀಡುವಂತೆ ರಾಜ್ಯ ಸರಕಾರ ಆದೇಶಿಸಿದ್ದು, ನಮ್ಮನ್ನು 31 ಮಾರ್ಚ 2006 ಕ್ಕಿಂತ ಪೂರ್ವದಲ್ಲಿದ್ದ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯಡಿಯಲ್ಲಿ ಪರಿಗಣಿಸಬೇಕು ಮತ್ತುಹೊಸ ಪಿಂಚಣಿ ಯೋಜನೆಗಾಗಿ ನಮ್ಮ ವೇತನದಲ್ಲಿ ಶೇಕಡಾ 10 ರಷ್ಟು ಕಟಾವಣೆ ಮಾಡುವ ವಂತಿಗೆಯನ್ನು ಸ್ಥಗಿತಗೊಳಿಸಬೇಕು. ಅಲ್ಲದೇ ಇಲ್ಲಿಯವರೆಗೆ ಕಟಾವಣೆ ಮಾಡಿರುವ ವಂತಿಗೆಯನ್ನು ಮರುಪಾವತಿ ಮಾಡಬೇಕು ಎಂದು ಒತ್ತಾಯಿಸಿ ಅಥಣಿ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಗುರುವಾರ ಇಲ್ಲಿನ ಕ್ಷೇತ್ರಶಿಕ್ಷಣಾಧಿಕಾರಿ ಎಂ.ಬಿ.ಮೊರಟಗಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಶಿಕ್ಷಕ, ಶಿಕ್ಷಕಿಯರು ನಾವು 2005-06 ನೇ ಸಾಲಿನಲ್ಲಿ ನೇಮಕಾತಿಗಾಗಿ ಅರ್ಜಿ ಸಲ್ಲಿಸಿ ನೇಮಕವಾಗಿದ್ದೇವೆ. ಸದರಿ ಅರ್ಜಿ ಸಲ್ಲಿಸಿ ಸಿ.ಇ.ಟಿ ಬರೆಯುವ ಮುಂಚೆ ಅಂದೆ 2005ರ ನವ್ಹೆಂಬರ್ 20 ರಂದು ನ್ಯಾಯಾಲಯದಿಂದ ತಡೆಯಾಜ್ಞೆ ಬಂದು ಪರಿಕ್ಷೆ ಮುಂದೂಡಲಾಯಿತು. 9 ತಿಂಗಳ ನಂತರ ಅಂದರೆ 2006ರ ಸಪ್ಟೆಂಬರ್ 4 ರಣದು ಪ್ರವೇಶ ಪರೀಕ್ಷೆಗಳು ನಡೆದು 2007ರ ಜನೇವರಿಯಲ್ಲಿ ನೇಮಕಾತಿ ಆದೇಶ ಮಾಡಲಾಯಿತು. ಈ ಬಗ್ಗೆ ನೇಮಕಾತಿ ಅಧಿಸೂಚನೆಯ ಕುರಿತು ಕೆಲವು ನ್ಯಾಯಾಲದ ವ್ಯಾಜ್ಯಗಳಿಂದ ವಿಳಂಬವಾಗಿರುವ ಪ್ರಕರಣಗಳಿಗೆ ಕೇಂದ್ರ ಮತು ರಾಜ್ಯ ಸರಕಾರದ ಪಿಂಚಣಿ ಯೋಜನೆಯನ್ವಯ 2021ರ ಫೆಬ್ರುವರಿ 17 ರಂದು ಕರ್ನಾಟಕ ಸರಕಾರ ಹೊಸ ಅಧಿಸೂಚನೆ ಹೊರಡಿಸಿದೆ. ತಾವುಗಳು ಸರಕಾರದ ಆದೇಶಿಸಿದಂತೆ ಅಥಣಿ ವಲಯದಲ್ಲಿ ಸೇವೆ ಸಲ್ಲಿಸುವ 2005-06 ನೇ ನೇಮಕಾತಿ ಶಿಕ್ಷಕರಿಗೆ ಹಳೆಯ ಪಿಂಚಣಿ ಸೌಲಭ್ಯ ನೀಡಬೇಕು ಎಂದು ಶಿಕ್ಷಕರು ಮನವಿ ಮಾಡಿದರು.
ಈ ವೇಳೆ ರಮೇಶ ನಾಯ್ಕ, ಆರ್.ಪಿ.ಉಳಗೊಂಡ, ಬಿ.ಜಿ.ಸಂಗೊಳ್ಳಿ, ಪಿ.ಬಿ.ತಳಕೇರಿ, ಎಸ್.ಎಂ.ಮಮದಾಪೂರ, ಆರ್.ಆರ್.ಪೂಜಾರಿ, ಎಂ.ಎಚ್.ಸವಣೂರ, ಎಸ್.ಎನ್.ಬಂಡಾರೆ, ಎ.ವೈ.ತಳವಾರ, ಎಂ.ಕೆ.ಕಂದಾರೆ, ಕೆ.ಡಿ.ಸಂಕಪಾಲ, ಬಾಹುಬಲಿ ಕಾಗವಾಡ, ಮಹಾಂತೇಶ ಕುಲ್ಲೋಳ್ಳಿ, ಬಿ.ಎಸ್.ಗುರವ, ಮಹಾದೇವ ಕಂಡಾರೆ ಇನ್ನೀತರರು ಉಪಸ್ಥಿತರಿದ್ದರು.