ಕೋವಿಡ್ ಕರ್ತವ್ಯದಲ್ಲಿ ಶಿಕ್ಷಕರ ಸಹಾಯಹಸ್ತ
ಗುಳೇದಗುಡ್ಡ 4: ಕೋವಿಡ್ ಸಂಕಷ್ಟದ ದಿನಗಳಲ್ಲಿ ಶಾಲಾ ಶಿಕ್ಷಕರೂ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸಿ ಮಾದರಿಯಾಗುತ್ತಿರುವುದು ಸತ್ಯ. ಅದಕ್ಕೆ ಗುಳೇದಗುಡ್ಡದ ಶಿಕ್ಷಕರೆ ಸಾಕ್ಷಿ. ಹೌದು, ಪಟ್ಟಣದ ಸಕರ್ಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಕಾರ್ಯಕ್ಕೆ ಹಾಗೂ ಡಾಟಾ ಎಂಟ್ರಿ ಕಾರ್ಯಕ್ಕೆ ಶಾಲಾ ಶಿಕ್ಷಕರು ಸಾಥ ನೀಡಿ ಕರ್ತವ್ಯ ನಿರ್ವಹಿಸುತ್ತಾರೆ. ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಶಿಕ್ಷಕರು ಕೋವಿಡ್ ಕಾರ್ಯದಲ್ಲಿ ಸಹಭಾಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿನ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ತಾಲೂಕು ಆಡಳಿತ ಈ ಕ್ರಮಕ್ಕೆ ಮುಂದಾಗಿದ್ದೂ ಗುಳೇದಗುಡ್ಡ ತಾಲೂಕಿನ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಪಟ್ಟಣದ ಸಕರ್ಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲು ನಿಯೋಜನೆ ಮಾಡಲಾಗಿದೆ. ಕೆಲವು ಶಿಕ್ಷಕರು ಸ್ವಯಂ ಪ್ರೇರಣೆಯಿಂದಲೇ ಕರ್ತವ್ಯಕ್ಕೆ ಬರುತ್ತಿದ್ದಾರೆಂದು ತಿಳಿದುಬಂದಿದೆ.
ಬಾದಾಮಿ ತಾಲೂಕಿನಿಂದ ಹೆಚ್ಚಿನ ಶಿಕ್ಷಕರು ಕೋವಿಡ್ ಕರ್ತವ್ಯದ ಮೇಲಿದ್ದಾರೆ. ಪ್ರತಿ ಶಿಕ್ಷಕರು ಎರಡು ವಾರ ಕರ್ತವ್ಯ ನಿರ್ವಹಿಸುತ್ತಾರೆ. ಗುಳೇದಗುಡ್ಡ ತಾಲೂಕಿನಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರನ್ನು ಕೇಳಿಲ್ಲ. ಕರ್ತವ್ಯದ ಈ ದಿನಗಳನ್ನು ಶಿಕ್ಷಕರಿಗೆ ಇಎಲ್ ದಿನಗಳಾಗಿ ಪರಿವತರ್ಿತವಾಗುತ್ತವೆ ಎಂದು ಸುದ್ದಿಗಾರರಿಗೆ ಬದಾಮಿಯ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಮಾಗಿ ತಿಳಿಸಿದ್ದಾರೆ. ಕೋವಿಡ್ ಕರ್ತವ್ಯದಲ್ಲಿ ಕಾರ್ಯ ನಿರ್ವಹಿಸುವ ಪ್ರತಿ ಶಿಕ್ಷಕರಿಗೆ ಗಳಿಕೆ ರಜೆಯನ್ನು ನೀಡಲಾಗುತ್ತದೆ. ಇದು ಸಾರ್ವಜನಿಕ ಕಾರ್ಯವಾಗಿದ್ದರಿಂದ ತಮ್ಮ ಸೇವೆಯೂ ಸ್ವಲ್ಪ ಮಟ್ಟಿಗೆ ದೊರಕಲಿ ಎಂಬ ಹಂಬಲದಿಂದ ಶಿಕ್ಷಕರು ಆಸ್ಪತ್ರೆಯ ಕೋವಿಡ್ ಕರ್ತವ್ಯಕ್ಕೆ ಹಾಜರಾಗಿರುವುದಾಗಿ ಶಿಕ್ಷಕರು ತಿಳಿಸಿದರು. ಪಟ್ಟಣದ ಸಕರ್ಾರಿ ಆಸ್ಪತ್ರೆಯಲ್ಲಿ ಆಟರ್ಿಫಿಸಿಯಲ್ ಟೆಸ್ಟ್ ಮಾಡಲು ಉದರ್ು ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಶ ಭಾಟ್, ಎಂ.ಕೆ. ಕನಕರಪೀರ, ಆಸ್ಪತ್ರೆ ಸಿಬ್ಬಂದಿ ಶೃತಿ ಕೊಣ್ಣೂರ, ಭಾರ್ಗವಿ ಹಾಲಪ್ಪನವರ್, ಚಂದ್ರು ಯರನಾಳ, ಎಂ.ವಿ.ರಾಠೋಡ ಹಾಜರಿದ್ದರು