ಸಿಂಧಗಿ

ಇಂದು ಶಿಕ್ಷಕರ ಅಭಿನಂದನಾ ಸಮಾರಂಭ

ಇಂದು ಶಿಕ್ಷಕರ ಅಭಿನಂದನಾ ಸಮಾರಂಭ

ಸಿಂದಗಿ: ಪಟ್ಟಣದ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಚೆನ್ನವೀರ ಸ್ವಾಮೀಜಿ ಪ್ರೌಢಶಾಲೆಯಲ್ಲಿ ಸುಮಾರು 37 ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ಶಿಕ್ಷಕ ಎಸ್.ಎಸ್.ಮಲ್ಲೇದ ಅವರಿಗೆ ಶಿಕ್ಷಕರಿಂದ ಅಭಿನಂದನಾ ಸಮಾರಂಭ ರವಿವಾರ ಸಂಜೆ 5 ಗಂಟೆಗೆ  ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಮಾಂಗಲ್ಯ ಭವನದಲ್ಲಿ ಜರುಗಲಿದೆ. 

ವಿಧಾರ್ಥಿ  ಪರಿಷತ್ ಸದಸ್ಯ ಅರುಣ ಶಹಾಪುರ ಗೆಳೆಯರ ಬಳಗ ಮತ್ತು ಎಸ್.ಎಸ್. ಮಲ್ಲೇದ ಶಿಷ್ಯ ಬಳಗ ಆಯೋಜಿಸಿದೆ.

ಸಾರಂಗಮಠ-ಗಚ್ಚಿನಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಸಮ್ಮುಖ ನಾರಾಯಣ ಜಿ. ನಾನಾಜಿಕರ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಉಪಸ್ಥಿತರಿರುವರು. ಉದ್ಘಾಟಕರಾಗಿ ಕಲಬುರಗಿಯ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್.ಪಾಸೋಡಿ, ಅಧ್ಯಕ್ಷತೆಯನ್ನು ವಿಜಯಪುರ ಸಾಶಿಇ ಉಪನಿರ್ದೇಶಕ ಎನ್.ವ್ಹಿ.ಹೊಸೂರ, ಮುಖ್ಯ ಅತಿಥಿಗಳಾಗಿ ಸಾಶಿಇ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷ ಕೆ.ಜಿ.ತೆಲಬಕ್ಕನವರ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ನಗನೂರ, ಅತಿಥಿಗಳಾಗಿ ದೈಹಿಕ ಶಿಕ್ಷಣ ವಿಷಯ ಪರೀವಿಕ್ಷಕ ಎ.ಎಂ.ಬಿರಾದಾರ, ಗಣ್ಯವ್ಯಾಪಾರಸ್ಥ ಬಸವರಾಜ ಅಂಬಲಗಿ, ದೈಹಿಕ ಶಿಕ್ಷಣ ಸಂಘದ ತಾಲೂಕಾ ಅಧ್ಯಕ್ಷ ಎಂ.ಎಂ.ಕೆಂಭಾವಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಸ್.ಎಸ್.ಮಲ್ಲೇದ ಗುರುಗಳ ಶಿಷ್ಯಬಳಗ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ