ಸಿಂಧಗಿ

ವಿವಿಧೆಡೆ ಅದ್ದೂರಿಯಾಗಿ ಶಿಕ್ಷಕರ ದಿನ ಆಚರಣೆ

ವಿವಿಧೆಡೆ ಅದ್ದೂರಿಯಾಗಿ ಶಿಕ್ಷಕರ ದಿನ ಆಚರಣೆ

ಸಿಂದಗಿ1: ತಾಲೂಕಿನ ಕನ್ನೊಳ್ಳಿ ಗ್ರಾಮದ ಶ್ರೀ ಲಕ್ಷ್ಮೀ ವಿದ್ಯಾವರ್ಧಕ ಸಂಸ್ಥೆಯ ಡಿ. ಎಸ್‌. ಪಾಟೀಲ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು. 

ಇದೇ ಸಂದರ್ಭದಲ್ಲಿ ಉಪನ್ಯಾಸಕಿ ರೂಪಾ ಬೆನಕೊಟಗಿ ಮಾತನಾಡಿ, ಪ್ರತಿಯೊಬ್ಬರ ಬಾಳಿನಲ್ಲೂ ಗುರುಗಳ ಪಾತ್ರ ಬಹಳ ಹಿರಿದು. ಶಾಲೆಯಲ್ಲಿ ಶಿಕ್ಷಕ ಶಿಕ್ಷಕಿಯರು ಕಲಿಸುವ ಪಾಠ, ನೀಡುವ ಮಾರ್ಗದರ್ಶನ ಸುಂದರ ಬದುಕಿಗೆ ಬುನಾದಿ. ಹೀಗಾಗಿ, ನಮ್ಮ ಭವಿಷ್ಯದ ಜೀವನಕ್ಕೊಂದು ಸುಂದರ ಅಡಿಪಾಯ ಹಾಕಿಕೊಡುವ ಶಿಕ್ಷಕರಿಗೆ ಸದಾ ಋಣಿಯಾಗಿರುವುದು ಕೂಡಾ ನಮ್ಮ ಕರ್ತವ್ಯ ಎಂದರು. 

ಈ ಸಮಯದಲ್ಲಿ ಪ್ರಚಾರ್ಯ ಐ. ಡಿ. ಪಡಶೆಟ್ಟಿ, ಉಪನ್ಯಾಸಕ ಮಹಾಂತೇಶ ನೂಲಾನವರ, ಮಂಜುನಾಥ್ ಬಡಿಗೇರ್ ಸೇರಿದಂತೆ ಅನೇಕರು ಇದ್ದರು. ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಗೊಳಿಸಿದರು.  

ಸಿಂದಗಿ2 :  

ಪಟ್ಟಣದ ಸಂಗಮೇಶ್ವರ ಕಾಲೇಜ್ ಆಫ್ ಫಾರ್ಮಸಿ ಹಾಗೂ ಕಾವ್ಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಬೀಲ್ಕೋಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯ ಹಾಗೂ ಸಾಹಿತಿ ಡಾ. ಚನ್ನಪ್ಪ ಕಟ್ಟಿ ಮಾತನಾಡಿ, ಒಬ್ಬ ಶಿಕ್ಷಕ ವಿದ್ಯಾರ್ಥಿಗಳನ್ನು ರೂಪಿಸುವ, ಆರೈಕೆ ಮಾಡುವ ಹಾಗೂ ಕಾಪಾಡುವ ಪಾತ್ರ ಬಹಳ ಮುಖ್ಯವಾದದ್ದು, ಒಂದು ವರ್ಷದ ಫಲ ಬೇಕಾದರೆ ಬೆಳೆಗಳನ್ನು ಬೆಳೆಯಬೇಕು ಹತ್ತು ವರ್ಷದ ಫಲ ಬೇಕೆಂದರೆ ಗಿಡಗಳನ್ನು ನೆಡಲೇಬೇಕು. ನೂರು ವರ್ಷದ ಫಲ ಬೇಕೆಂದರೆ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಬೀಜ ಬಿತ್ತಬೇಕು ಎಂದು ಹೇಳಿದರು.  

ಈ ವೇಳೆ ಶಕುಂತಲಾ ಹಿರೇಮಠ, ನಿವೃತ್ತ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಎಂ.ಎಂ. ಹಂಗರಗಿ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್ ನಾಗರಬೆಟ್ಟ, ಸಂಸ್ಥೆಯ ಕಾರ್ಯದರ್ಶಿಗಳಾದ ಕಾಂಚನಾ ನಾಗರಬೆಟ್ಟ, ಪ್ರಾಚಾರ್ಯ ಸಂದೀಪ್ ಚಾಂದಕವಟೆ, ಮುಖ್ಯಗುರು ರಾಜಕುಮಾರ್ ಕಾಂಬಳೆ, ಮಹಾಂತೇಶ್ ಕಮಲಾಪುರ್, ಸಂತೋಷ್ ಚೌಹಾಣ್, ಬಸವರಾಜ್ ಪಾಟೀಲ್, ಸೇರಿದಂತೆ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  ಕುಮಾರಿ ಐಶ್ವರ್ಯ ಹಾಗೂ ವರ್ಷ ನಿರೂಪಿಸಿದರು ವಂದಿಸಿದರು. 

ಸಿಂದಗಿ3:  

ನಗರದ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಶಿಕ್ಷಕ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಉಮೇಶ ಪೂಜೇರಿ, ಗದಿಗೆಯ್ಯ ನಂದಿಮಠ, ಅನಿಲಕುಮಾರ ರಜಪೂತ, ಗೀರೀಶ ಕುಲಕರ್ಣಿ, ಭಾಗ್ಯಶ್ರೀ ನಂದಿಮಠ, ಪ್ರಭಾವತಿ ಮಾಲೀಪಾಟೀಲ, ಶೃತಿ ಹೂಗಾರ, ಮುರ್ತುಬಿಬೇಗಂ ಬಿರಾದಾರ, ಲಕ್ಷ್ಮೀ ಕೆಸರಗೊಪ್ಪ, ಪ್ರಿಯಾಂಕ ಬ್ಯಾಕೋಡ, ಮಂಗಳಾ ಈಳಗೇರ, ಡಿ.ಎಮ್‌.ಪಾಟೀಲ್, ಮಮತಾ ಹರನಾಳ, ಶಿವಶಂಕರ ಕುಂಬಾರ ಮತ್ತು ಮುದ್ದು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ