ತರಳಬಾಳು ಕಾಲೇಜ ಪದವಿ ಪ್ರದಾನ ಸಮಾರಂಭ
ರಾಣೇಬೆನ್ನೂರು 11: ನಗರ ಹೊರವಲಯದಲ್ಲಿ ಕಳೆದ 43 ವರ್ಷಗಳಿಂದ ಉತ್ತಮ, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಪ್ರಸಕ್ತ ಸಾಲಿನಲ್ಲಿ 2023ರಲ್ಲಿ ಉತ್ತೀರ್ಣರಾದ ಪದವೀಧರರಿಗೆ ಪದವಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಿವಕುಮಾರ ಬಿ ಅವರು, ತಂತ್ರಜ್ಞಾನ ಮತ್ತು ಜಾಗತೀಕರಣದ ಸ್ಪಧರ್ಾತ್ಮಕ ಜಗತ್ತಿನಲ್ಲಿ ಅತ್ಯಾಧುನಿಕ ತಂತ್ರಗಳೊಂದಿಗೆ ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕೆಂದು ಹೊಸ ಪದವೀಧರರಿಗೆ ಸಲಹೆ ನೀಡಿದರು. ಜೊತೆಗೆ ತಮ್ಮ ಮೌಲ್ಯಗಳು ಮತ್ತು ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ಹೇಳಿದರು. ಬೆಳೆಯುತ್ತಿರುವ ಈ ಜಗತ್ತಿಗೆ ಪೈಪೋಟಿ ನೀಡಿ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕಾಲೇಜಿನ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಗೌರವಿಸಲಾಯಿ. ತುಡೀನ್ ಅಕ್ಯಾಡೆಮಿಕ್ ಡಾ.ಎಸ್.ಎಫ್. ಕೊಡದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಭಾಗದ ಮುಖ್ಯಸ್ಥ ಪ್ರೊ.ಸಿ.ಎಂ.ಪರಮೇಶ್ವರಪ್ಪ, ಡಾ.ಎಸ್.ಜಿ. ಮಾಕನೂರು, ಡಾ.ಬಿ.ಮಹೇಶ್ವರಪ್ಪ, ಡಾ.ಜೆ. ಓ.ಕಿರಣ್, ಪ್ರೊ. ದಿನೇಶ್ ಮಾಗನೊರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಎಸ್.ಎಫ್ ಕೊಡದ್ ಸ್ವಾಗತಿಸಿದರು. ಪ್ರೊ. ಎಸ್. ಲೋಕೇಶ್ ವಂದಿಸಿದರು. ಪ್ರೊ.ಲತಾ ಜಾಧವ್ ನಿರೂಪಿಸಿದರು.