ತಾರಾಕಾಕಿ ಶಿರಗಾಂವಕರ ಜನ್ಮಶತಾಬ್ದಿ ವರ್ಷ: ಭಜನಾ ಸ್ಪರ್ಧೆ
ಕಾಗವಾಡ 26: ತಾಲೂಕಿನ ಉಗಾರ್ ಪಟ್ಟಣದ ಮಹಿಳಾ ಮಂಡಳದ ದಿವಂಗತ ಅಧ್ಯಕ್ಷ ತಾರಾಕಾಕಿ ಶಿರಗಾಂವಕರ ಇವರ ಜನ್ಮಶತಾಬ್ದಿ ವರ್ಷದ ನಿಮಿತ್ಯ ಭಜನಾ ಸ್ಪರ್ಧೆಯನ್ನು ರವಿವಾರದಂದು ವಿಹಾರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸ್ಪರ್ಧೆಯಲ್ಲಿ ಬೆಳಗಾವಿ ಸಂಕೇಶ್ವರ, ನಿಪ್ಪಾಣಿ, ಸಾಂಗ್ಲಿ, ಕೊಲ್ಲಾಪುರ್ ಪಟ್ಟಣಗಳಿಂದ 16 ತಂಡಗಳು ಸ್ಪರ್ಧಿಸಿದವು. ಯಶಸ್ವಿ ಸ್ಪರ್ಧಕರಿಗೆ ಅನುಕ್ರಮವಾಗಿ 8000, 6000, 4000 ಮತ್ತು ಪ್ರಶಸ್ತಿ ಪತ್ರ ನೀಡಿದರು.
ಉಗಾರ ಮಹಿಳಾ ಮಂಡಳ ಅಧ್ಯಕ್ಷ ಸ್ಮಿತಾತಾಯಿ ಶಿರಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಸಾಂಗ್ಲಿ ಜಿಲ್ಲೆಯ ಬಿಲವಡಿ ಪಟ್ಟಣದ ಹಾಲು ಉದ್ದಿಮೆ ಅಲಕಾ ಚಿತಳೆ ಅತಿಥಿಗಳಾಗಿ ಆಗಮಿಸಿ ಸ್ಪರ್ಧೆ ಉದ್ಘಾಟಿಸಿದರು.
ಸ್ಪರ್ಧಾ ಕಾರ್ಯಕ್ರಮ ಯಶಸ್ವಿಗೊಳಿಸಿಲು ಮಹಿಳಾ ಮಂಡಳಿ ಸದಸ್ಯರಾದ ಅನಿತಾ ಪೂಜಾರಿ, ಮೇಘ ತೆಂಡೂಲ್ಕರ್, ರೇಖಾ ಪಿಂಪಳಕರ, ಸಾಧನಾ ಡೆರೆ ಸೇರಿದಂತೆ ಅನೇಕರು ಸಹಕರಿಸಿದರು. ಖ್ಯಾತ ಗಾಯಕ ಋಷಿಕೇಶ್ ಬೂಡಸ, ಸುಧೀರ್ ಪೂಟೆ, ಪ್ರೊಫೈಲ್ ಶೆರೆಗಾವಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.