ತಾಲೂಕಾ ಮಟ್ಟದ ಕ್ರೀಡಾ ಕೂಟ
ಶಿವಾನಂದ ಮಹಾವಿದ್ಯಾಲಯಕ್ಕೆ ಸತತ 7ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ
ಶೇಡಬಾಳ 01: 2022-23ನೇ ಸಾಲಿನ ತಾಲೂಕಾ ಮಟ್ಟದ ಕ್ರೀಡಾ ಕೂಟದಲ್ಲಿ ಕಾಗವಾಡ ಶಿವಾನಂದ ಪದವಿ ಪೂರ್ವ ಮಹಾವಿದ್ಯಾಲಯವು ಸತತವಾಗಿ ಏಳನೇಯ ಬಾರಿ ಸಮಗ್ರ ವೀರಾಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.
ದಿನಾಂಕ: 26, 27/08/2022 ರಂದು ಎಸ್.ಎಚ್.ವ್ಹಿ. ಪದವಿ ಪೂರ್ವ ಮಹಾವಿದ್ಯಾಲಯ, ಉಗಾರದಲ್ಲಿ ನಡೆದ ತಾಲೂಕಾ ಮಟ್ಟದ ಕ್ರೀಡಾ ಕೂಟದಲ್ಲಿ ಶಿವಾನಂದ ಪದವಿ ಪೂರ್ವ ಕಾಲೇಜಿನ ಕ್ರೀಡಾ ಪಟುಗಳು ಭಾಗವಹಿಸಿ, ವೈಯಕ್ತಿಕ ಆಟಗಳಲ್ಲಿ 19 ಪ್ರಥಮ ಸ್ಥಾನ, 7 ದ್ವಿತೀಯ ಸ್ಥಾನ, 3 ತೃತೀಯ ಸ್ಥಾನ ಹಾಗೂ 4ಘಿ100 ಮೀಟರ್, 4ಘಿ400 ಮೀಟರ್ ರಿಲೆಯಲ್ಲಿ ಬಾಲಕರು ಪ್ರಥಮ ಸ್ಥಾನ ಪಡೆದಿದ್ದಾರೆ. ಚೆಸ್ ಹಾಗೂ ಟೆನಿಕ್ವಾಯಿಟ್ ಸ್ಪರ್ಧೆಗಳಲ್ಲಿ ಬಾಲಕರು ಮತ್ತು ಬಾಲಕೀಯರು ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕೀಯರು ಥ್ರೋ-ಬಾಲ್ ಪ್ರಥಮ, ಖೋ-ಖೋ ದ್ವಿತೀಯ, ಬಾಲಕರ ವಿಭಾಗದಲ್ಲಿ ಕಬಡ್ಡಿ, ಖೋ-ಖೋ, ಥ್ರೋ-ಬಾಲ್ದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಒಟ್ಟು 215 ಅಂಕಗಳನ್ನು ಪಡೆದುಕೊಂಡು ಶಿವಾನಂದ ಪದವಿ ಪೂರ್ವ ಮಹಾವಿದ್ಯಾಲಯವು ಸತತವಾಗಿ ಏಳನೇಯ ಬಾರಿ ಸಮಗ್ರ ವೀರಾಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.
ಈ ಎಲ್ಲ ಸಾಧನೆ ಮಾಡಿದ ಕ್ರೀಡಾ ಪಟುಗಳಿಗೂ ಹಾಗೂ ದೈಹಿಕ ನಿರ್ದೇಶಕರಾದ ಶ್ರೀ. ಅಮರ ಕೋರವಿ ಇವರಿಗೆ ಕಾಲೆಜಿನ ಆಡಳಿತ ಮಂಡಳಿಯವರು ಕಾರ್ಯದರ್ಶಿಗಳಾದ ಶ್ರೀ. ಬಿ.ಎ.ಪಾಟೀಲ, ಪ್ರಾಚಾರ್ಯರುಗಳಾದ ಪ್ರೊ. ವ್ಹಿ.ಎಸ್.ತುಗಶೆಟ್ಟಿ, ಪ್ರೊ. ಪಿ.ಬಿ.ನಂದಾಳೆ ಹಾಗೂ ಸಿಬ್ಬಂದಿಯವರು ಅಭಿನಂದನೆ ಕೋರಿದ್ದಾರೆ.