ಬಾಬರ್ ಆಸ್ಪತ್ರೆಯ ಮೇಲೆ ತಾಲೂಕಾ ಮಟ್ಟದ ಅಧಿಕಾರಿಗಳು ದಾಳಿ
ಇಂಡಿ: ಸರಕಾರದ ಅನುಮತಿ ಇಲ್ಲದೆ ಮತ್ತು ಸಂಬಂಧಿಸಿದ ವೈದ್ಯಕೀಯ ಕೋರ್ಸ ಮುಗಿಸದೇ ಇದ್ದರೂ ಅಕ್ರಮವಾಗಿ ಆಸ್ಪತ್ರೆ ನಡೆಸುತ್ತಿದ್ದ ಬಾಬರ್ ಆಸ್ಪತ್ರೆಗೆ ಗುರುವಾರ ತಹಶೀಲ್ದಾರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪಟ್ಟಣದ ಅಂಬೇಡ್ಕರ ವೃತ್ತದ ಸಮೀಪದಲ್ಲಿ ಬಾಬರ್ ದವಾಖಾನೆ ಹೆಸರಿನ ಆಸ್ಪತ್ರೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ರೋಗಿಗಳು ಅಡ್ಮಿಟ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.
ತಹಸೀಲ್ದಾರ್ ನಾಗಯ್ಯ ಹಿರೇಮಠ ಹಾಗೂ ಆರೋಗ್ಯ ಅಧಿಕಾರಿ ಡಾ. ಅರ್ಚನಾ ಕುಲಕರ್ಣಿ ಆಸ್ಪತ್ರೆ ಇಡಲು ಅನುಮತಿ ನೀಡಿದ ಬಗ್ಗೆ ದಾಖಲಾತಿ ಕೇಳಿದ್ದಾರೆ. ಆದರೆ (ಕೆಪಿಎಂಈ) ಮುಖಾಂತರ ಅನುಮತಿ ಪಡೆಯದೆ ಮತ್ತು ಸಂಬಂಧಿಸಿದ ಕೋರ್ಸ ಮುಗಿಸದೇ ಆಸ್ಪತ್ರೆ ಹಾಕಿದ್ದು, ಈ ಕೂಡಲೆ ಆಸ್ಪತ್ರೆ ಬಂದ್ ಮಾಡಬೇಕು ಇಲ್ಲವಾದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಆಸ್ಪತ್ರೆಗೆ ಬೀಗ ಹಾಕಿಸಿದ್ದಾರೆ.
ಈ ಸಂದರ್ಭದಲ್ಲಿ ಕಂದಾಯ ನೀರೀಕ್ಷಕ ಬಸವರಾಜ ರಾವೂರ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.