ಕಾಗವಾಡ

ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

ಕಾಗವಾಡ 29: ಮಕ್ಕಳಲ್ಲಿ ಯಾವುದಾದರೂ ಒಂದು ಪ್ರತಿಭೆ ಇದ್ದೇ ಇರುತ್ತದೆ. ಯಾರಲ್ಲಿ ಸಂಗೀತ, ನಾಟಕ, ಗಾಯನದಲ್ಲಿ ಪ್ರತಿಭೆ ಇರುತ್ತದೆ. ಯಾರಿಗೆ ಹೆಚ್ಚು ಯಾರಲ್ಲಿ ಕಡಿಮೆಯಿರುತ್ತದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.  

ಅವರು ದಿ.29ರಂದು ಉಗಾರ ಖುರ್ದ ಪಟ್ಟಣದ ಶ್ರೀಹರಿ ವಿದ್ಯಾಲಯದ ವಿಹಾರ ಆವರಣದಲ್ಲಿ ಜಿಪಂ ಬೆಳಗಾವಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸನ್ 2021-22ನೇ ಸಾಲಿನ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮವನ್ನು ಸರಸ್ವತಿ ಪೂಜೆ, ಸಸಿಗೆ ನೀರೆರೆಯುವದರೊಂದಿಗೆ ಹಾಗು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ ಜೀವನದಲ್ಲಿ ಆನಂದ ಬರಬೇಕಾದರೆ. ಇಂತಹ ಕಾರ್ಯಕ್ರಮ ನೋಡಿದಾಗ ಜೀವನ ಸಾರ್ಥಕವಾಗುತ್ತದೆ ಎಂದರು.ಮುಖ್ಯ ಅತಿಥಿಗಳಾಗಿ ಕಾಗವಾಡ ತಹಸೀಲ್ದಾರ ರಾಜೇಶ ಬುರ್ಲಿ ಭಾಗವಹಿಸಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಸುನೀಲ ಬಬಲಾದಿ, ಅಕ್ಷರ ದಾಸೋಹ ದ ಕೆ.ಟಿ ಕಾಂಬಳೆ, ರವಿಂದ್ರ ಖಡಾಕಡಿ, ಗೌಡಪ್ಪ ಸಡ್ಡಿ, ಎಂ ಜಿ  ಸಂಕಪಾಳ ಸೇರಿದಂತೆ ಇತರರು ಇದ್ದರು. ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಧಿಕಾರಿ ಎಂ ಆರ್ ಮುಂಜೆ ಮಾತನಾಡಿದರು. ಗೌಡಪ್ಪ ಸಡ್ಡಿ ವಂದಿಸಿದರು. 


ಸುದ್ದಿ ಓದಿ