ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ
ಲೋಕದರ್ಶನ ವರದಿ
ಶಿಗ್ಗಾವಿ 06: ಮೊದಲು ನಮಗೆ ನಾವೇ ಕಿಮ್ಮತ್ತು ಕೊಡಬೇಕು ನಂತರ ಬೇರೆಯವರು ನಮಗೆ ಕಿಮ್ಮತ್ತು ಕೊಡುತ್ತಾರೆ ಎಂದು ಧಾರವಾಡದ ಹ್ಯೂಮನ್ ಮೈಂಡ್ ಸೆಟ್ನ ಕೋಚ್ ಮಹೇಶ ಮಾಶಾಳ ಹೇಳಿದರು.
ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ನಡೆದ ಶಿಗ್ಗಾವಿ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸ ನೀಡುತ್ತ ಮಾತನಾಡಿದ ಹೃದಯ ವೈಶ್ಯಾಲತೆಯಿಂದ ಮಾತ್ರ ಮಕ್ಕಳ ಮನಸ್ಸನ್ನ ಅರ್ಥ ಮಾಡಿಕೊಳ್ಳುವ ಶಿಕ್ಷಕರಾಗಲು ಸಾದ್ಯವಿದೆ ನಿಷ್ಠೆ ಎಂದರೆ ನಮ್ಮ ಕಾಯಕದಲ್ಲಿ ನಾವು ತೊಡಗಿಕೊಳ್ಳುವುದು, ಒಳ್ಳೆಯ ಶಿಕ್ಷಕರಾಗಲು ಶಿಕ್ಷಕರ ಮೇಲೆ ಮಕ್ಕಳಿಗೆ ಪ್ರೀತಿ ಬರುವಂತೆ ನೋಡಿಕೊಳ್ಳಬೇಕು, ಮಕ್ಕಳಿಗೆ ಹಸಿವಿನ ಅರಿವು ಮತ್ತು ಸಮಯದ ಬಗ್ಗೆ ಚಿಂತಿಸಲಾರದ ಹಾಗೇ ಪಾಠ ಮಾಡಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಅಂಬಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಕರಾದವರು ಸಮಯಕ್ಕೆ ಬೆಲೆ ಕೊಟ್ಟಾಗ ಮಾತ್ರ, ಶಿಕ್ಷಕರ ಶ್ರಮ ಸಾರ್ಥಕವಾಗಲು ಸಾಧ್ಯವಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಶಿಕ್ಷಣ ಸಂಘಗಳ ಸಹಕಾರವೇ ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ 21 ಶಿಕ್ಷಕರನ್ನು ಮತ್ತು ಗಂಗಮ್ಮ ಬೊಮ್ಮಾಯಿ ಟ್ರಸ್ಟ ವತಿಯಿಂದ 10 ಪ್ರಾಥಮಿಕ ಮತ್ತು ಫ್ರೌಡ ಶಾಲೆಗಳ ಅತ್ಯುತ್ತಮ ಶಿಕ್ಷಕರನ್ನು ಧನ ಸಹಾಯ ನೀಡಿ ಸನ್ಮಾನಿಸಲಾಯಿತು.
ವಿರಕ್ತಮಠದ ಸಂಗನಬಸವ ಶ್ರೀ ಸಾನಿಧ್ಯ ವಹಿಸಿದ್ದರು, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಇಓ ಪ್ರಶಾಂತ ತುರಕಾಣಿ, ಅಶೋಕ ಕುಂಬಾರ, ಪ್ರಭಯ್ಯ ಚಿಕ್ಕಮಠ, ಗೀತಾಂಜಲಿ ತೆಪ್ಪದ, ಅರುಣ ಹುಡೇದಗೌಡ್ರ, ರಮೇಶ ಹರಿಜನ, ಎ ಎಫ್ ಹೊಸಮನಿ, ಬಿ ವಾಯ್ ಉಪ್ಪಾರ, ಬಿ ಶ್ರೀನಿವಾಸ, ಕುಮಾರ ಹುಲಗೂರ, ಗುರುರಾಜ ಹುಚ್ಚಣ್ಣವರ, ರಾಜಶೇಖರ ಹೆಸರೂರ, ಡಿ ಪಿ ಕೆರೂರ, ಡಿ ಸಿ ಸೂರಗೊಂಡ, ಕೆ ಸಿ ಚಕ್ರಸಾಲಿ, ಎಚ್ ಎಚ್ ರಟ್ಟಿಹಳ್ಳಿ, ನಾಗಪ್ಪ ಬೆಂತೂರ ಸೇರಿದಂತೆ ವಿವಿಧ ಸಂಘಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.