ರಾಣೆಬೆನ್ನೂರ

ತಾಲೂಕಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

ತಾಲೂಕಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

ರಾಣೇಬೆನ್ನೂರ,03: ತಾಲೂಕ ಕ್ಲಸ್ಟರ್ ಮಟ್ಟದ 2024- 25 ನೇ ಸಾಲಿನ ರಾಜ್ಯದ ಮುಂದುವರೆದ ಯೋಜನಾ ಕಾರ್ಯಕ್ರಮ ಅಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 7 ಸಭಾಭವನದಲ್ಲಿ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. . ಸ್ಪರ್ಧೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ   ನೂರಾರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.  

ಪ್ರತಿಭಾ ಕಾರಂಜಿಯಲ್ಲಿ ಭಾಷಣ, ಚದ್ಮ ವೇಷ, ಕಥೆ ಹೇಳುವುದು, ಚಿತ್ರಕಲೆ, ಬಣ್ಣ ಹಚ್ಚುವಿಕೆ, ಅಭಿನಯ ಗೀತೆ, ಕ್ಲೇ ಮಾಡ್ಲಿಂಗ್, ಭಕ್ತಿ ಗೀತೆ, ಕವನ, ಪದ್ಯ ವಾಚನ, ಚರ್ಚಾ ಸ್ಪರ್ಧೆ, ಭರತನಾಟ್ಯ,ದೇಶಭಕ್ತಿ ಗೀತೆ, ಪ್ರಬಂಧ ಸ್ಪರ್ಧೆ ಸೇರಿದಂತೆ ಮತ್ತಿತರ ಚಟುವಟಿಕೆಗಳ ಸ್ಪರ್ಧೆಗಳು ನಡೆದವು.  

ರಾಣೆಬೆನ್ನೂರು  ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇವರ ಮಾರ್ಗದರ್ಶನದಲ್ಲಿ  ಸಿ. ಆರ್‌. ಪಿ. ರಾಜೇಂದ್ರ ಅವರು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿ, ಗಮನ ಸೆಳೆದರು. ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ವಿಶೇಷ ಪ್ರತಿಭೆ ಮೇರೆ ವಿದ್ಯಾರ್ಥಿಗಳಿಗೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಥಳೀಯ ಮಾರ್ಡನ್, ಶಿಕ್ಷಣ ಸಂಸ್ಥೆಯು, ಮಹಾಪ್ರಸಾದ ವಿತರಿಸಿ ಸಂಭ್ರಮಿಸಿದರು. ಸ್ಪರ್ಧೆಯಲ್ಲಿ ಶಿರಡಿ ಸಾಯಿ ಇಂಟರ್ನ್ಯಾಷನಲ್  ಸ್ಕೂಲ್ ವಿದ್ಯಾರ್ಥಿಗಳು ಭರತನಾಟ್ಯದಲ್ಲಿ ಪ್ರಥಮ ಸ್ಥಾನ ಪಡೆದರೆ, ಅದೇ ಶಾಲೆಯ ಮತ್ತೋರ್ವ  ವಿದ್ಯಾರ್ಥಿನಿ ನವ್ಯ  ರಾಮನಗೌಡ್ರ ಛದ್ಮ ವೇಷ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಕ್ಕಾಗಿ  ಪ್ರಾಂಶುಪಾಲ ಮಣಿಕಂಠ ತೊಗಟವೀರ ಅವರು ಪ್ರತಿಭಾ ಕಾರಂಜಿಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಹಾರ್ದಿಕವಾಗಿ ಅಭಿನಂದಿಸಿದ್ದಾರೆ 


ಸುದ್ದಿ ಓದಿ