ಪತ್ರಕರ್ತ ಕಾಲಕ್ಕೆ ತಕ್ಕಂತೆ ಉನ್ನತೀಕರಣ ಹೊಂದಲಿ: ಮಂಗಸೂಳಿ
ಅಥಣಿ 5: ಸಂವಿಧಾನದ ನಾಲ್ಕನೇಯ ಅಂಗವೇ ಪತ್ರಿಕೆಯಾಗಿದ್ದು ಸಮಾಜದ ಓರೆ ಕೋರೆಗಳನ್ನು ತಿದ್ದಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.
ಅವರು ಅಥಣಿ ಪಟ್ಟಣದ ಐಎಂಎ ಹಾಲ್ನಲ್ಲಿ ತಾಲೂಕಾ ಮಟ್ಟದ ಪತ್ರಕರ್ತರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಾ ಶಾಸಕಾಂಗ ಕಾಯಾರ್ಂಗ ನ್ಯಾಯಾಂಗದ ಜತೆ ಪತ್ರಿಕಾಂಗವು ಕೂಡ ಉತ್ತಮ ಸಮಾಜದ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ, ಪತ್ರಕರ್ತ ಕಾಲಕ್ಕೆ ತಕ್ಕಂತೆ ಉನ್ನತೀಕರಣ ಹೊಂದಬೇಕು. ಪರಿವರ್ತನ ಜಗದ ನಿಯಮ ಪರಿವರ್ತನೆಗೆ ತಕ್ಕಂತೆ ಅನುಭವ ಜ್ಞಾನ ವಿಸ್ತಾರವಾಗಬೇಕು. ಇಂದಿನ ದಿನಮಾನಗಳಲ್ಲಿ ಪತ್ರಕರ್ತರು ಹಲವಾರು ವಿಷಯಗಳಿಗೆ ಹೊಂದಿಕೊಂಡು ಹೋಗಬೇಕಾದರೆ ತರಬೇತಿಗಳು ಅವಶ್ಯಕ ಎಂದು ಹೇಳಿದರು.
ನಂತರ ಡಿವೈಎಸ್ಪಿ ಎಸ್.ವಿ.ಗಿರೀಶ್ ಮಾತನಾಡುತ್ತಾ ಅಥಣಿಯಲ್ಲಿ ನಡೆಯುತ್ತಿರುವ ಪತ್ರಕರ್ತರ ಕಾರ್ಯಾಗಾರ ಪತ್ರಕರ್ತರಿಗೆ ಹೊಸ ಅನುಭವಗಳನ್ನು ವಿಷಯ ವಿಶೇಷಗಳನ್ನೂ ತಿಳಿಸುವ ಮೂಲಕ ಪತ್ರಿಕಾರಂಗದ ಕುರಿತ ವಿಷಯ ಜ್ಞಾನ ಹೆಚ್ಚಿಸಿ ಗುಣಮಟ್ಟದ ಪತ್ರಿಕೋದ್ಯಮಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಬಸವರಾಜ ಬುಟಾಳಿ ಮಾತನಾಡುತ್ತಾ ಪಟ್ಟಣದ ಪತ್ರಕರ್ತರು ನಿರಂತರವಾಗಿ ಸಮಾಜವನ್ನು ಸರಿದಾರಿಗೆ ತರುವಲ್ಲಿ ಶ್ರಮಿಸುತ್ತಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಪದಕ ವಿಜೇತ ಸಿಪಿಐ ಶಂಕರಗೌಡ ಬಸನಗೌಡರ ಅವರು ಉತ್ತಮ ಪತ್ರಕರ್ತರಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಿಕೆಯ ಪಾತ್ರ ಮುಖ್ಯವಾದದ್ದು ಒಮ್ಮೊಮ್ಮೆ ಸುಳ್ಳಿನಿಂದ ಸಮಾಜಕ್ಕೆ ಒಳ್ಳೆಯದಾಗುತ್ತಿದ್ದರೆ ಸುಳ್ಳು ಹೇಳುವುದೇ ಉತ್ತಮ ಏಕೆಂದರೆ ಸಮಾಜದ ಸ್ವಾಸ್ಥ್ಯ ಮುಖ್ಯವಾದದ್ದು ಆದರೆ ನಮ್ಮ ಆಯ್ಕೆ ಸಮಾಜ ಹಾಗೂ ಜನತೆಯ ಹಿತ ಬಯಸುವ ದೃಷ್ಟಿಯಿಂದ ಆಯ್ಕೆ ಆಗಿರಬೇಕೆ ಹೊರತು ಸ್ವಾರ್ಥಕ್ಕಲ್ಲ ಎಂದು ಹೇಳಿದರು.
ನಂತರದಲ್ಲಿ ವರದಿಗಾರಿಕೆಗೆ ಇಂದಿನ ಸವಾಲುಗಳು ಕುರಿತು ಅಮರೇಗೌಡ ಗೋನವಾರ ಹಾಗೂ ಮಾಧ್ಯಮ ಮತ್ತು ಸಮಾಜ ವಿಷಯದ ಕುರಿತು ವಿನಾಯಕ ಮಠಪತಿ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಮತ್ತು ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಎಸ್ ಕೆ ಬೂಟಾಳಿ, ಧರೆಪ್ಪ ಠಕ್ಕಣ್ಣವರ, ಸಂತೋಷ್ ಸಾವಡ್ಕರ್, ಡಾ ರವಿ ಸಂಕ, ಅಮೋಘ ಖೋಬ್ರಿ, ಕೆ ಎ ವನಜೋಳಿ, ರವಿ ಪೂಜಾರಿ, ರಾವಸಾಬ ಐಹೊಳೆ, ಶ್ರೀಕಾಂತ ಪೂಜಾರಿ, ಯುಸೂಫ ನಾಲಬಂದ, ದಿಲೀಪ ಲೋಣಾರೆ, ಮಿಥೇಶ ಪಟ್ಟಣ, ರಾಮಣ್ಣಾ ಧರಿಗೌಡ, ಪರಶುರಾಮ ನಂದೇಶ್ವರ, ಚನ್ನಯ್ಯಾ ಇಟ್ನಾಳಮಠ, ರವಿ ಕಾಂಬಳೆ ಉಪಸ್ಥಿತರಿದ್ದರು.
ವಿಜಯ ಹುದ್ದಾರ ಪ್ರಾರ್ಥನೆ ನೆರವೇರಿಸಿದರು ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ ಸ್ವಾಗತಿಸಿದರು ಸಂತೋಷ ಬಡಕಂಬಿ ನಿರೂಪಿಸಿದರು.
ಅಥಣಿ ಕಾಗವಾಡ ರಾಯಬಾಗ ಚಿಕ್ಕೋಡಿ ಮೂಡಲಗಿ ಬನಹಟ್ಟಿ ಜಮಖಂಡಿ ಮುಂತಾದ ತಾಲೂಕುಗಳಿಂದ 110 ಕ್ಕೂ ಹೆಚ್ಚು ಪತ್ರಕರ್ತರು ಕಾರ್ಯಾಗಾರಕ್ಕೆ ಆಗಮಿಸಿದ್ದರು
ಪತ್ರಕರ್ತ ಸಂಘದ ಅಮಿತ ಕಾಂಬಳೆ, ಅಜೀತ ಕಾಂಬಳೆ, ಶಿವರಾಜ ನೇಸರಗಿ, ಸಂಜೀವ ತೋರಿ, ಹಣಮಂತ ಮೀಷಿ ಉಪಸ್ಥಿತರಿದ್ದರು.