ಜಾತಿ ಪ್ರಮಾಣ ಪ್ರತ ಹರಿದು ತಳವಾರ ಸಮಾಜ ಪ್ರತಿಭಟನೆ
ಇಂಡಿ: ಕಳೆದ 40 ವರ್ಷಗಳಿಂದ ತಳವಾರ ಸಮುದಾಯ ನಡೆಸುತ್ತಿರುವ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಕೊಡಲು ಅಧಿಸೂಚನೆ ಹೊರಡಿಸಿ ಆದೇಶಿಸಿದರೂ ಸಮುದಾಯದ ಜನಕ್ಕೆ ಜಾತಿ ಪ್ರಮಾಣ ಪತ್ರ ಕೊಡದೇ ಇರುವ ಕಾರಣಕ್ಕೆ ತಳವಾರ ಸಮುದಾಯದ ಯುವಜನಾಂಗ ಕಂದಾಯ ಇಲಾಖೆಯಿಂದ ಮನೆ-ಮನೆಗೆ ಕಂದಾಯ ಇಲಾಖೆಯ ಸೌಲಭ್ಯ ಯೋಜನೆ ಅಡಿಯಲ್ಲಿ ಬರುವ ಪ್ರವರ್ಗ-1 ರ ಜಾತಿ ಪ್ರಮಾಣ ಪತ್ರ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ತಾಲೂಕಿನ ಸಂಗೋಗಿ ಹಾಗೂ ಮಸಳಿ ಗ್ರಾಮದಲ್ಲಿ ನಡೆದಿದೆ.
ಈ ಸಂದರ್ಭದಲ್ಲಿ ಸಂಗೋಗಿ ಗ್ರಾಮದ ತಳವಾರ ಸಮುದಾಯದ ಮುಖಂಡ ತುಳಜುರಾಮ ನಾಟೀಕಾರ ಮಾತನಾಡಿ ಬಹುತೇಕವಾಗಿ ತಾಲೂಕಿನಲ್ಲಿ ತಳವಾರ ಸಮುದಾಯದ ಜನರಿಂದ ರಾಜ್ಯ ಸರಕಾರದ ಮಹತ್ವಕಾಂಕ್ಷೆ ಮನೆ ಮನೆಗೂ ಕಂದಾಯ ದಾಖಲೆ ಯೋಜನೆಯ ವಿರುದ್ಧ ವಿತರಿಸಿದ ಪ್ರವರ್ಗ 1ರ ಜಾತಿ ಪ್ರಮಾಣ ಪತ್ರ ಹರಿದು ಹಾಕಿ ಸಮುದಾಯದ ಜನರಿಂದ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈಗಾಗಲೇ ಝಳಕಿ, ಸೊನಕನಹಳ್ಳಿ, ಶಿರಗೂರ ಇನಾಂ ಸೇರಿದಂತೆ ತಾಲೂಕಿನ ಇತರೆ ಗ್ರಾಮಗಳಲ್ಲಿ ಸರಕಾರದ ಐತಿಹಾಸಿಕ ಯೋಜನೆ ವಿರುದ್ಧ ಸರಣಿ ಪ್ರತಿಭಟನೆ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಸರಕಾರ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಕೊಡಲು ಸ್ವಷ್ಟವಾದ ಆದೇಶವಿದ್ದರೂ ಅಧಿಕಾರಿಗಳು ಮಾತ್ರ ಸೇವೆಯನ್ನು ಒದಗಿಸಿದೇ, ಏಕಪಕ್ಷಿಯವಾಗಿ ಮಾತ್ರ ತ್ರಾಂತ್ರಿಕ ಸುಳ್ಳಿನ ಕಂತೆ ಕಟ್ಟಿ ಸಮುದಾಯಕ್ಕೆ ಅನಾನೂಕೂಲತೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮನೆ ಮನೆಗೆ ಕಂದಾಯ ದಾಖಲೆ ಮತ್ತು ಜಿಲ್ಲಾ ಅಧಿಕಾರಗಳ ನಡೆ ಗ್ರಾಮದ ಕಡೆ ಯೋಜನೆಯಿಂದ ಯಾವ ನ್ಯಾಯ ಸಿಗುತ್ತದೆ ಎಂದು ಪ್ರಶ್ನಿಸಿದರು.
ಇಂಡಿ ತಾಲೂಕಿನಲ್ಲಿ ಸುಮಾರು 25 ಸಾವಿರ ಕ್ಕಿಂತಲೂ ಹೆಚ್ಚಿನ ತಳವಾರ ಸಮುದಾಯದ ಜನಸಂಖ್ಯೆ ಹೊಂದಿದ್ದೇವೆ. ಎಚ್ಚರವಿರಲಿ ಇನ್ನೂ ಕಾಲ ಮಿಂಚಿಲ್ಲ ಮುಂದೆ ಚುನಾವಣೆಗಳು ಬರಲಿವೆ ನಮ್ಮ ಜನ ರೊಚ್ಚಿಗೆಳುವುದರಲ್ಲಿ ನಮಗೆ ಪರಿಶಿಷ್ಠ ಪಂಗಡ (ಖಖಿ) ದ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಯಶವಂತರಾಯ ಬಿರಾದಾರ, ಹಿರಗು ಬಿರಾದಾರ, ಅಂಬಣ್ಣ ನಾಟೀಕಾರ, ಸದಾನಂದ ನಾಟೀಕಾರ, ಲಕ್ಕು ಬೈರೋಡಗಿ, ಸುದೀಪ ಆಲಮೇಲ, ಸಂತೋಷ ನಾಟೀಕಾರ, ಅನೀಲ ಬಿರಾದಾರ, ಅಂಬರೀಷ ಬಿರಾದಾರ, ಆಕಾಶ ಕೋಳಿ, ಯಲ್ಲಪ್ಪ ಡೊಂಗ್ರೊಜಿ, ಶರಣು ಯಂಕಂಚಿ, ಅರ್ಜುನ ತಳವಾರ, ರಾಯಗೊಂಡ ತಳವಾರ, ಪಿರ್ಪ ವಾಲಿಕಾರ, ಸುನೀಲ ಭಾಸಗಿ, ರಮೇಶ ಡೊಂಗ್ರೊಜಿ, ಶ್ರೀಕಾಂತ ಹಳಗುಣಕಿ, ನಿಂಗಪ್ಪ ತಿಳಗೋಳ, ಸುರೇಶ ಡೊಂಗ್ರೊಜಿ, ರಾಜು ಯಂಕಂಚಿ, ಶ್ರಿಕಾಂತ ವಾಲಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.