ರಾಣೆಬೆನ್ನೂರ

ಉಚಿತ ಕಣ್ಣಿನ ತಪಾಸಣಾ ಶಿಬಿರ ಕ್ಷೇತ್ರದ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು: ಶಿವರಾಯ ಪ್ರಭು

ಉಚಿತ ಕಣ್ಣಿನ ತಪಾಸಣಾ ಶಿಬಿರ  ಕ್ಷೇತ್ರದ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು: ಶಿವರಾಯ ಪ್ರಭು

 ರಾಣೇಬೆನ್ನೂರು,29: ಸಮಾಜದಲ್ಲಿ ಎಲ್ಲರೂ ಶ್ರೀಮಂತರೇ ಇಲ್ಲ. ಇದ್ದವರೊ ಇಲ್ಲದವರೊ ಸಹ ಇದ್ದಾರೆ. ಸಮಾನತೆಗಾಗಿ  ಪ್ರತಿಯೊಬ್ಬರು ಸಹಾಯ ಹಸ್ತವನ್ನು ನೀಡುವುದರ ಮೂಲಕ ಸಹಭಾಗಿಗಳಾಗಿ ಜೀವನವನ್ನು ಸಾರ್ಥಕತೆ ಪಡಿಸಿಕೊಳ್ಳಲು ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದು, ಎಸ್‌.ಕೆ.ಡಿ. ಆರ್‌. ಡಿ.ಪಿ. ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಹೇಳಿದರು. ಅವರು ಶನಿವಾರ ಯೋಜನಾ ಕಛೇರಿ  02 ರ ವ್ಯಾಪ್ತಿಯ, ಹರಳಯ್ಯ ನಗರ ಮತ್ತು ವಾಗೀಶ ನಗರದ  ಚೌಡೇಶ್ವರಿದೇವಿ ಕಲ್ಯಾಣ ಮಂಟಪದಲ್ಲಿ, ಹುಬ್ಬಳ್ಳಿಯ ಡಾಕ್ಟರ್ ಎಂ. ಎಂ. ಜೋಶಿ ನೇತ್ರಾಲಯ ಆಸ್ಪತ್ರೆ ಸಹಯೋಗದಲ್ಲಿ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮಗಳಲ್ಲಿ ಆಯೋಜಿಸಿದ್ದ, ಉಚಿತ ಆರೋಗ್ಯ ನೇತ್ರ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.  

ಸಂಸ್ಥೆಯಲ್ಲಿ , ಪ್ರಗತಿ ನಿಧಿ ನೀಡುವುದು ಅಷ್ಟೇ ಅಲ್ಲ. ಜೊತೆಗೆ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ನೀರ್ಗತಿಕರಿಗೆ  ಮಾಸಾಸನ, ವಾತ್ಸಲ್ಯ,ಕಾಮಗಾರಿ, ವಾಚಲ್ಯ ಮಿಕ್ಸ್‌ ವಿತರಣೆ, ವಿಕಲಚೇತನರಿಗೆ ಸಾಧನ ಸಲಕರಗಳ  ವಿತರಣೆ, ದೇವಸ್ಥಾನ ರಚನೆಗೆ ಧನಸಹಾಯ, ರುದ್ರ ಭೂಮಿ ಅಭಿವೃದ್ಧಿ, ಸಮುದಾಯದ ಅಭಿವೃದ್ಧಿಗೆ  ಅನುದಾನ, ಶಾಲೆಗಳಿಗೆ ಡೆಸ್ಕ್‌, ಬೆಂಚ್ ವಿತರಣೆ, ಜ್ಞಾನದೀಪ ಶಿಕ್ಷಕರ ಆಯ್ಕೆ, ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ, ಜೊತೆಗೆ ಅನೇಕ ಯೋಜನೆಗಳು ಜಾರಿಯಲ್ಲಿವೆ ಎಂದರು. 

ಶಿಬಿರವನ್ನು ಉದ್ಘಾಟಿಸಿ ಚಾಲನೆ ನೀಡಿದ, ಸ್ವಾ.ಕ.ರ  ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಅವರು, ಸ್ವಸಹಾಯ ಸಂಘದ ಸದಸ್ಯರು, ಕೇವಲ ಸಾಲ ಪಡೆಯುವುದು ಅಷ್ಟೇ ಅಲ್ಲ. ಇಂತಹ ಕ್ರಿಯಾಯೋಜನೆಗಳು ಬಂದಾಗ  ಜನಸಾಮಾನ್ಯರಿಗೆ ತಮ್ಮ ಸುತ್ತ ಮುತ್ತಲ ಇರುವ ನಾಗರಿಕರಿಗೆ,ಸೇವೆ ಪಡೆಯುವ ಅವಕಾಶ ಕಲ್ಪಿಸಬೇಕು ಎಂದರು.  

ಹರಳಯ್ಯ ನಗರದಲ್ಲಿ ನಡೆದ ಶಿಬಿರವನ್ನು ನಗರಸಭಾ ಸದಸ್ಯ ಪ್ರಕಾಶ ಪೂಜಾರ್ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು.  

ನಗರಸಭಾ ಸದಸ್ಯ ಪ್ರಭಾವತಿ ತಿಳುವಳ್ಳಿ ಅವರು ಮಾತನಾಡಿ, ಕಣ್ಣಿನ ಚಿಕಿತ್ಸೆ ಪಡೆಯಬೇಕಾದರೆ ಇಂದು ಸಾಕಷ್ಟು ವೆಚ್ಚ ಮಾಡಬೇಕಾಗುತ್ತದೆ. ಜನಸಾಮಾನ್ಯರಿಗೇ ಇದು ಬಹಳಷ್ಟು ಕಷ್ಟದ ಕೆಲಸ, ಸಂಘ ಸಂಸ್ಥೆಗಳು, ಧರ್ಮಸ್ಥಳ ಕ್ಷೇತ್ರದ ಗ್ರಾಮದಲ್ಲಿ ಯೋಜನೆ ಜನಸಾಮಾನ್ಯರ ಸೇವೆಯಲ್ಲಿ ನಿರತರಾಗಿದ್ದು, ಇದರ ಪ್ರಯೋಜನ ಪ್ರತಿಯೊಬ್ಬರು ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.  

ವೇದಿಕೆಯಲ್ಲಿ ಎಂ.ಎಂ.ಜೋಶಿ ನೇತ್ರಾಲಯದ ಸ್ಥಾನಿಕ ವೈದ್ಯ ಉತ್ತರಾ ಭಟ್, ಕರವೇ ರಾಜ್ಯ ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ ಅಭಿರುಚಿ ಸಂಸ್ಥೆಯ  ಕಾರ್ಯದರ್ಶಿ ಕೆ.ಎಸ್‌. ನಾಗರಾಜ್, ಕಲಾವಿದ ಶಿವಕುಮಾರ ಜಾದವ್, ಆಟೋ ಘಟಕದ ಅಧ್ಯಕ್ಷ ಭಾಷಾಸಾಬ್ ಹಂಪಾಪಟ್ಟಣ , ಒಕ್ಕೂಟದ ಅಧ್ಯಕ್ಷ ನಾಗಮ್ಮ ತೇವರ, ಪಾಂಡುರಂಗ ದೇವಸ್ಥಾನ ಸಮಿತಿಯ ನಾರಾಯಣ ಗೋವಿಂದಕರ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 

 ಯೋಜನೆಯ ಮೇಲ್ವಿಚಾರಕ ಸತೀಶ್ ಡಿ. ಸ್ವಾಗತಿಸಿದರು.ತಾಲೂಕಾ ಯೋಜನಾಧಿಕಾರಿ, ಮಂಜುನಾಥ್ ಎಂ.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕ ಸಮನ್ವಯಾಧಿಕಾರಿ ವೆಂಕಟಮಾಲಾ , ನಿರೂಪಿಸಿ ವಂದಿಸಿದರು. ಮುಂಜಾನೆಯಿಂದ ಸಂಜೆವರೆಗೂ  ನಡೆದ ನೇತ್ರ ತಪಾಸಣಾ ಶಿಬಿರದಲ್ಲಿ 200 ಕ್ಕೂ ಹೆಚ್ಚು ಫಲಾನುಭವಿಗಳು  ಭಾಗವಹಿಸಿ ತಪಾಸಣೆಗೊಳಪಟ್ಟರು. ಶಿಬಿರದಲ್ಲಿ ಎಂ.ಎಂ.ಜೋಷಿ ನೇತ್ರಾಲಯದ ವೈದ್ಯಕೀಯ,ತಂಡದ ಡಾ: ಉತ್ತರಾ ಭಟ್, ಸಂಜೀವ್ ಭಾವಿಕಟ್ಟೆ, ಅಶೋಕ, ಪ್ರಿಯಾಂಕಾ ಪೂಜಾರ್, ಪ್ರೇಮಾ ನವಲಗುಂದ್, ಅನು  ಪಿ, ಗಂಗಮ್ಮ ಅವರಗೊಳ್ಳ ಹಬ್ಬು ಮತ್ತಿತರರು ಪಾಲ್ಗೊಂಡು, ತಮ್ಮ ಸೇವೆ ಸಲ್ಲಿಸಿದರು. 


ಸುದ್ದಿ ಓದಿ