ಕುಷ್ಟಗಿ

ಸ್ವಚ್ಛತೆ ಜೊತೆಗೆ ಆರೋಗ್ಯ ಕಾಳಜಿ ವಹಿಸಿರಿ: ಅಮೀನ್ ಅತ್ತಾರ

ಸ್ವಚ್ಛತೆ ಜೊತೆಗೆ ಆರೋಗ್ಯ ಕಾಳಜಿ ವಹಿಸಿರಿ: ಅಮೀನ್ ಅತ್ತಾರ

ಲೋಕದರ್ಶನ ವರದಿ 

ಕುಷ್ಟಗಿ 10: ಪ್ರತಿ ಗ್ರಾಮದಲ್ಲಿ ಸಾರ್ವಜನಿಕರು ತಮ್ಮ ಮನೆಯ ಸುತ್ತ-ಮೂತ್ತಲು ಕಸವನ್ನು ಹಾಕದೇ ನೈರ್ಮಲ್ಯತೆ ಕಾಪಾಡಬೇಕೆಂದು ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಅಮೀನ್ ಅತ್ತಾರ ಕರೆ ನೀಡಿದರು. 

ತಾಲೂಕಿನ ಹೂಲಗೇರಿ ಗ್ರಾಮ ಪಂಚಾಯತಿಯ ಹೂಲಗೇರಾ ಗ್ರಾಮದ ಗುಂಡ ಮಲ್ಲೇಶ್ವರ ದೇವಸ್ಥಾನದ ಸಮುದಾಯ ಭವನದ ಆವರಣದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಚಿಲುಮೆ-2 ಸ್ವಚ್ಛ ಶುಕ್ರವಾರದ ಶ್ರಮದಾನ  

ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದ ಅವರು  ಜನರಲ್ಲಿ ಜಾಗೃತಿ ಉಂಟಾಗಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ. 

ಸ್ವಚ್ಛತೆಯ ಶ್ರಮದಾನದಲ್ಲಿ ಶಿವಪ್ಪ ಸುಬೇದಾರ್ ಕಾರ್ಯನಿರ್ವಾಹಕ  ಅಧಿಕಾರಿಗಳು ತಾಲೂಕ ಪಂಚಾಯತ, ಗ್ರಾಮ ಪಂಚಾಯತ ಅಧ್ಯಕ್ಷೆ ರೇಣುಕಾ ಗೌಡ್ರ, ಹನಮಂತಗೌಡ ಪೋಲಿಸ್ ಪಾಟೀಲ್ ಸಹಾಯಕ ನಿರ್ದೇಶಕರು(ಪಂಚಾಯತ್ ರಾಜ್), ವಿಶ್ವನಾಥ ರಾಠೋಡ ಸಹಾಯಕ ನಿರ್ದೇಶಕ ರು(ಗ್ರಾಉ), ಶ್ರೀಶೈಲ್ ಪೊಲೆಸಿ ಎಸ್ ಬಿ  ಎಂ ನೋಡಲ್ ಅಧಿಕಾರಿ, ಗ್ರಾಮ ಪಂಚಾಯತ ಸದಸ್ಯರು, ಸಂತೋಷ ಮನಗೂಳಿ ಪಂಚಾಯತ ಅಭಿವೃದ್ದಿ ಅಧಿಕಾರಿ,ದೇವರಾಜ ಪತ್ತಾರ ತಾಲೂಕ ಐಇಸಿ ಸಂಯೋಜಕರು,  ಸಂಜೀವಿನಿ ಯೋಜನೆಯ ಮಹಿಳಾ ಸ್ವಸಹಾಯ ಸಂಘದ ಒಃಏ, ಐಅಖಕ&ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ&ಅಂಗನವಾಡಿ ಕಾರ್ಯಕರ್ತೆ ಯರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು& ತಾಂತ್ರಿಕ ಸಹಾಯಕರು, ಬೇರ್ ಪೂಟ್ ಟೆಕ್ನಿಷಿಯನ್, ಗ್ರಾಮ ಕಾಯಕ ಮಿತ್ರ ಹಾಜರಿದ್ದರು 

ಸುದ್ದಿ ಓದಿ