ಉನ್ನತ ಶಿಕ್ಷಣ.ಹುದ್ದೆಗಳಿಸುವಲ್ಲಿ 371(ಜೆ) ಸದ್ಭಳಕೆ ಮಾಡಿಕೊಳ್ಳಿ ತಹಸೀಲ್ದಾರ್ ಎಸ್.ಶಿವರಾಜ
ಕಂಪಿ ್ಲ17: ಕರ್ನಾಟಕದ ಭಾಗದ ಯುವಕರು 371(ಜೆ)ಸದ್ಭಳಕೆ ಉಪಯೋಗಿಸಿ ಉನ್ನತ ಶಿಕ್ಷಣಉನ್ನತ ಹುದ್ದೆಗಳಿಸುವಲ್ಲಿ ಮುಂದಾಗಬೇಕು ಎಂದು ತಹಸೀಲ್ದಾರ್ ಎಸ್.ಶಿವರಾಜ ಹೇಳಿದರು.ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ,371(ಜೆ) ಅಭಿವೃದ್ಧಿಯಾಗಲಿಕ್ಕೆ ವಿಶೇಷ ಅನುದಾನ ಸಿಗಲಿದೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ಹುದ್ದೆ ಗಳಿಸುವಂತೆ ಮಕ್ಕಳಲ್ಲಿ ಪ್ರೇರೇಪಿಸಬೇಕಿದೆ ಎಂದರು.
ಷಾ.ಮಿಯಾಚಂದ್ ಸರ್ಕಾರಿ ಹೈಸ್ಕೂಲ್ ಶಿಕ್ಷಕ ಡಾ.ಬಿ.ಸುನೀಲ್ ಉಪನ್ಯಾಸ ನೀಡಿ,ಅಳವಂಡಿ ಶಿವಮೂರ್ತಿಸ್ವಾಮಿಗಳ ಪಾತ್ರ ನೆನಪಿಸಬೇಕಿದೆ. ಕ-ಕ ಭಾಗದ ಅಭಿವೃದ್ಧಿಗೆ 371(ಜೆ) ನೀಡಿದ್ದು ವರದಾನವಾಗಿದೆ ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಕ-ಕ ಭಾಗಕ್ಕೆ 1ವರ್ಷ 32ದಿನಗಳ ನಂತರ ಸ್ವಾತಂತ್ರ್ಯ ದೊರಕುವಲ್ಲಿ ಹೋರಾಟಗಾರರ ಪಾತ್ರ ಮಹತ್ವದ್ದಾಗಿದೆ. ಎಂದರು
ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಡಿಟಿ ಬಿ.ರವೀಂದ್ರಕುಮಾರ್, ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಪಿ.ಬ್ರಹ್ಮಯ್ಯ, ತಾಲೂಕು ಮಟ್ಟದ ಅಧಿಕಾರಿಗಳಿದ್ದರು. ಪುರಸಭೆ: ಮುಖ್ಯಾಧಿಕಾರಿ ಕೆ.ದುರುಗಣ್ಣ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ರಮೇಶ್ ಬೆಳಂಕರ್, ಮಹ್ಮದ್ ಗೌಸ್, ಎಂ.ವಸಂತಮ್ಮ ಸೇರಿ ಸಿಬ್ಬಂದಿ ಇದ್ದರು.ಕಸಾಪ: ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಜಿ.ಪ್ರಕಾಶ್, ಬಂಗಿ ದೊಡ್ಡ ಮಂಜುನಾಥ, ಯು.ಎಂ.ವಿದ್ಯಾಶಂಕರ್, ಕಾಳಿಂಗವರ್ಧನ ಹಾದಿಮನಿ, ಶಾಮಸುಂದರರಾವ್, ಎಲಿಗಾರ ವೆಂಕಟರೆಡ್ಡಿ ಇತರರಿದ್ದರು.