ಕಾಗವಾಡ

ಪದವಿ ಶಿಕ್ಷಣಕ್ಕೆ ಸಾಲದ ಲಾಭ ಪಡೆದುಕೊಳ್ಳಿ

ಪದವಿ ಶಿಕ್ಷಣಕ್ಕೆ ಸಾಲದ ಲಾಭ ಪಡೆದುಕೊಳ್ಳಿ

ಲೋಕದರ್ಶನ ವರದಿ 


ಕಾಗವಾಡ 16: ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಅರಿವು ಸಾಲ ಯೋಜನೆಯಡಿಯಲ್ಲಿ ಸಾಲ ಪಡೆಯಲು ನಿಗಮದ ವೆಬ್ ಸೈಟ್ “ಆನ್ ಲೈನ್" ಮುಖಾಂತರ ಅರ್ಜಿ ಸಲ್ಲಿಸದೆ ಇರುವಂತಹ ವಿದ್ಯಾರ್ಥಿಗಳು, ಆಯಾ ಜಿಲ್ಲಾ ಕಛೇರಿಗಳಲ್ಲಿ, ಕಾಲೇಜಿನ ದೃಢೀಕರಣ ಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸಲ್ಲಿಸಿ ಇದರ ಲಾಭ ಪಡೆದು ಕೊಳ್ಳಬೇಕೆಂದು ಸಂಯೋಜಕರು ಭಾರತೀಯ ಜೈನ ಸಂಘಟನೆ ಬೆಳಗಾವಿ ವಿಭಾಗದ ಅರುಣ ಯಲಗುದ್ರಿ ಇವರು ವಿದ್ಯಾರ್ಥಿಗಳಿಗೆ ಕರೆ ನೀಡಿದಾರೆ.  

ಮಂಗಳವಾರ ದಿ. 15ರಂದು ಕಾಗವಾಡದಲ್ಲಿ ಅರುಣ ಯಲಗುದ್ರಿ ಇವರು ಮಾಹಿತಿ ನೀಡುವಾಗ ಕಳೆದ ವರ್ಷದ  2019-20 ನೇ ಸಾಲಿನಲ್ಲಿ ನಿಗಮದಿಂದ ಆನ್ ಲೈನ್ ಮುಖಾಂತರ ಅರ್ಜಿ ಆಹ್ಮಾನಿಸಿದ್ದು, ಸದರಿ ವರ್ಷದಲ್ಲಿ ಅರಿವು ಅರ್ಜಿ ಸಲ್ಲಿಸಿ ಋ ಪಡೆದು ಸಾಲ ಪಡೆಯದೆ ಇರುವಂತಹ ವಿದ್ಯಾರ್ಥಿಗಳಿಗೆ, 2021-22 ನೇ ಸಾಲಿನಲ್ಲಿ ಪರಿಗಣಿಸಿ ಅಂತಹ ವಿದ್ಯಾರ್ಥಿಗಳು, ಕಾಲೇಜಿನ ದೃಢೀಕರಣ ಪತ್ರ ಹಾಗೂ ಇತರೆ ದಾಖಲಾತಿಗಳನ್ನು ಆಯಾ ಜಿಲ್ಲಾ ವ್ಯವಸ್ಥಾಪಕರ ಕಛೇರಿಗಳಲ್ಲಿ ವಿದ್ಯಾರ್ಥಿಗಳಿಗೆ ಸಲ್ಲಿಸಲು ಸೂಚಿಸಲಾಗಿದೆ. ಸದರಿ ವಿದ್ಯಾರ್ಥಿಗಳು ಪ್ರಸಕ್ತ ವರ್ಷದಲ್ಲಿ ಅಂದರೆ 2021-22ನೇ ಸಾಲಿನಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿರಬೇಕು. 

2021-22ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆ-ಅಇಖಿ (ಐಂಖಿಇಖಂಐ ಇಓಖಿಖಙ) ಯಿಂದ, ಇಂಜಿನಿಯರಿಂಗ್ ಕೋರ್ಸ್‌ ಗೆ ವಿವಿಧ ಕಾಲೇಜುಗಳಲ್ಲಿ ಆಯ್ಕೆಯಾಗುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು ಸಾಲ ಯೋಜನೆಯಡಿಯಲ್ಲಿ ಸಾಲ ಪಡೆಯಲು ನಿಗಮದ ವೆಬ್ ಸೈಟ್ ಞಟಜಛಿಠಟಟಿಜ.ಞಚಿಡಿಟಿಚಿಣಚಿಞಚಿ.ರಠ.ಟಿ “ಆನ್ ಲೈನ್" ಮುಖಾಂತರ ಅರ್ಜಿ ಸಲ್ಲಿಸದೆ ಇರುವಂತಹ ವಿದ್ಯಾರ್ಥಿಗಳು, ಆಯಾ ಜಿಲ್ಲಾ ಕಛೇರಿಗಳಲ್ಲಿ ಕಾಲೇಜಿನ ದೃಢೀಕರಣ ಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ. 

 2019-20 ನೇ ಸಾಲಿನಲ್ಲಿ ನಿಗಮದಿಂದ ಆನ್ ಲೈನ್ ಮುಖಾಂತರ ಎಲ್ಲಾ ಪದವಿ (ಆಇಉಖಇಇ) ಕೋರ್ಸುಗಳಿಗೆ ಅರ್ಜಿ ಸಲ್ಲಿಸಿ ಅರಿವು ವಿದ್ಯಾಭ್ಯಾಸ ಸಾಲ ಪಡದಿರುವಂತಹ ವಿದ್ಯಾರ್ಥಿಗಳು ಪ್ರಸಕ್ತ ವರ್ಷದಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳು 2021-22 ನೇ ಸಾಲಿಗೆ ರಿನಿವಲ್ (ಖಇಓಇಘಂಐ) ಪ್ರಕರಣಗಳಿಗೆ ಮಾತ್ರ, ಆಯಾ ಜಿಲ್ಲಾ ಕಛೇರಿಗಳಲ್ಲಿ ವಿದ್ಯಾರ್ಥಿಗಳು ಕಾಲೇಜಿನ ದೃಢೀಕರಣ ಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ. 

 ದಾಖಲಾತಿಗಳನ್ನು ಸಲ್ಲಿಸಲು ಪ್ರಾರಂಭಿಕ ದಿ. 14ರಿಂದ ಆರಂಭಗೊಂಡಿದ್ದು, ದಾಖಲಾತಿಗಳನ್ನು  ಸ್ವೀಕರಿಸಲು ಕೊನೆಯ ತಿಂಗಳ ದಿ.24 ಆಗಿದೆ ಎಂದರು. 


ಸುದ್ದಿ ಓದಿ