ಟ್ಯಾಗೂರು ಶಿಕ್ಷಣ ಸಂಸ್ಥೆ: ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳು, ಸಾಧಕರಿಗೆ ಬಹುಮಾನಗಳು
ರಾಣೇಬೆನ್ನೂರು 13: ಸಮಾಜದಲ್ಲಿ ಶಿಕ್ಷಕ ಸಮುದಾಯಕ್ಕೆ ಸದಾಕಾಲವೂ ಪ್ರೀತಿ, ವಿಶ್ವಾಸ, ಅಭಿಮಾನ ಗೌರವ ಸನ್ಮಾನಗಳು ಇದ್ದೇ ಇರುತ್ತದೆ ಅಂತಹ ಗೌರವ ಸನ್ಮಾನಗಳಿಗೆ ಪಾತ್ರರಾಗಬೇಕಾದರೆ, ಪೂರ್ವ ಜನ್ಮದ ಪುಣ್ಯದ ಫಲವೆಂದು ಭಾವಿಸಬೇಕಾಗುತ್ತದೆ ಎಂದು ರೋಟರಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯ ಅಧ್ಯಕ್ಷ ಜಯಣ್ಣ. ಚ. ಜಂಬಗಿ ಹೇಳಿದರು. ಅವರು ನಗರದ ಟ್ಯಾಗೋರ್ ಶಿಕ್ಷಣ ಸಂಸ್ಥೆಯ, ರೋಟರಿ ಆಂಗ್ಲ ಮಾದ್ಯಮ ಶಾಲೆಯಲ್ಲಿ, ರೋಟರಿ ಕ್ಲಬ್ ಹಾಗೂ ಇನ್ರವಿಲ್ ಕ್ಲಬ್ ಆಯೋಜಿಸಿದ್ದ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ 135ನೇ ಜನ್ಮದಿನೋತ್ಸವದ, ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈ ದೇಶದ ಸಂಸ್ಕೃತಿ, ಆಚಾರ ವಿಚಾರ, ಮತ್ತು ಗುರುಕುಲ ಶಿಕ್ಷಣ ಪರಂಪರೆ ಆಧುನಿಕತೆಯ ಶಿಕ್ಷಣದ ಮಧ್ಯೆಯೂ ಸಾಗುತ್ತಿರುವುದು ಶಿಕ್ಷಣ ಭದ್ರಬುನಾದಿಗೆ ಸಾಕ್ಷಿಯಾಗಿದೆ. ಭವಿಷ್ಯದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ದೇಶದ ಶೈಕ್ಷಣಿಕ ಮತ್ತು ಆರ್ಥಿಕ ಭದ್ರಬುನಾದಿಗೆ ಸಾಕ್ಷಿಯಾಗಬೇಕಾದ ಅಗತ್ಯ ಮತ್ತು ಅವಶ್ಯವಿದೆ ಎಂದರು.
ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು, ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಾರ್ವಜನಿಕವಾಗಿ ನಡೆದ ಸಮಾರಂಭದಲ್ಲಿ ಶಾಲೆಯ ಶಿಕ್ಷಕರನ್ನು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿ ಅಭಿನಂದಿಸಲಾಯಿತು. ಶಿಕ್ಷಣ ಸಂಸ್ಥೆಯ ಛೇರಮನ್ ರೋ.ಬಸವರಾಜ ಎಸ್. ಕೇಲಗಾರ ಅವರು ಮಾತನಾಡಿ ಬದಲಾದ ಕಾಲಮಾನದಲ್ಲಿ ಶಿಕ್ಷಕರು ಕೂಡ ತಮ್ಮ ವೃತ್ತಿಯಲ್ಲಿ ಇಂದಿನ ತಂತ್ರಜ್ಞಾನ ಬಳಸಿ ಮಕ್ಕಳಿಗೆ ಮನಮುಟ್ಟುವ ಹಾಗೇ ಭೋದನೆಯನ್ನು ಮಾಡಬೇಕು ಎಂದು ಮನವಿ ಮಾಡಿದರು. ಇನ್ನರ್ ವ್ಹಿಲ್ ಅಧ್ಯಕ್ಷ ಶೋಭಾ ಜ ಜಂಬಿಗಿ, ಕಾರ್ಯದರ್ಶಿ ರೋ.ಪುಟ್ಟರಾಜ ಅಂಗಡಿ, ಕಾರ್ಯದರ್ಶಿ ಕೆ ವಿ ಶ್ರೀನಿವಾಸ್, ಆಡಳಿತ ಮಂಡಳಿ ನಿರ್ದೇಶಕರು, ಪ್ರಾಚಾರ್ಯ, ಕೆ. ಎನ್.ಆರಿಕಟ್ಟಿ, ಮುಖ್ಯೋಪಾಧ್ಯಾಯರಾದ ಪ್ರಕಾಶ್ ಚೌಟಗಿ, ವೀಣಾ ಮಾಜಿ ಗೌಡ್ರು, ಸೇರಿದಂತೆ ಟ್ಯಾಗೋರ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು, ರೋಟರಿ ಮತ್ತು ಇನ್ನರ್ ವ್ಹಿಲ್ ಸದಸ್ಯರು ಶಿಕ್ಷಕರು ಸಿಬ್ಬಂದಿ ಉಪಸ್ಥಿತರಿದ್ದರು.