ಭೂಮಿ ಹದಗೊಳಿಸಲು ಟ್ಯಾಕ್ಟರ್ ಅವಶ್ಯಕ
ಗುಳೇದಗುಡ್ಡ,ಆ.20: ಬಹಳಷ್ಟು ಭೂಮಿಯಿದ್ದಾಗ ಉಳುಮೆ ಮಾಡಲು ಎತ್ತುಗಳ ಜೊತೆಗೆ ಭೂಮಿ ಹದಗೊಳಿಸಲು ಟ್ಯಾಕ್ಟರ್ಗಳು ಅವಶ್ಯಕವಾಗಿವೆ ಎಂದು ಲಾಯದಗುಂದಿ ಪಿಕೆಪಿಎಸ್ ಅಧ್ಯಕ್ಷ ಪ್ರಕಾಶ ಗೌಡರ ಹೇಳಿದರು.
ಇತ್ತೀಚಿಗೆ ಲಾಯದಗುಂದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸರ್ಕಾರದ ಸಹಾಯಧನ ಹಾಗೂ ಶೇ 3 ರ ಕಡಿಮೆ ಬಡ್ಡಿ ದರದಲ್ಲಿ ರೈತರಾದ ಶಿವಾನಂದ ತಿಪ್ಪಣ್ಣ ಕೂಚಲ ಹಾಗೂ ಗಂಗಪ್ಪ ಉಪ್ಪಾರ ಅವರಿಗೆ ಟ್ಯಾಕ್ಟರ್ಗಳನ್ನು ಪಿಕೆಪಿಎಸ್ನಿಂದ ಖರೀದಿಸಿ ಕೀ ಹಸ್ಥಾಂತರಿಸಿ ಮಾತನಾಡಿ, ರೈತರು ದೇಶದ ಬೆನ್ನೆಲುಬು ರೈತರು ಬೆಳೆದಾಗ ಮಾತ್ರ ದೇಶದಲ್ಲಿರುವ ಎಲ್ಲರಿಗೂ ಆಹಾರ ಒದಗಿಸಲು ಸಾಧ್ಯ. ರೈತರಿಗೆ ಸರ್ಕಾರ ಸಾಲಮನ್ನಾ, ಸಬ್ಸಿಡಿ ದರದಲ್ಲಿ ಟ್ಯಾಕ್ಟರ್ಗಳು, ಕೃಷಿ ಪರಿಕರಗಳು, ರಾಸಾಯನಿಕ ಗೊಬ್ಬರ ಮುಂತಾದ ಸೌಲಭ್ಯಗಳನ್ನು ನೀಡುತ್ತಿದೆ, ಸರ್ಕಾರದ ಸೌಲಭ್ಯಗಳನ್ನು ರೈತರು ಪಡೆದುಕೋಂಡು ಮುಂದೆ ಬರಬೇಕೆಂದು ಹೇಳಿದರು.
ಪಿಕೆಪಿಎಸ್ ಸದಸ್ಯರಾದ ಎನ್.ಬಿ ಮಾಳವಾಡ, ಪ್ರಭುಲಿಂಗ ಗೌಡರ್ ಹಾಗೂ ತಿಪ್ಪಣ್ಣ ಗೋಡಿ, ತಿಪ್ಪಣ್ಣ ಕೂಚಲ, ಮಹಾದೇವಪ್ಪ ಕುರಿ, ಭೀಮನಗೌಡ ಗೌಡರ ಮುಂತಾದವರು ಇದ್ದರು.