ಮನರಂಜನೆ

ನಾನು ಏಕಾಂಗಿಯಾಗಲು ಕಾರಣ... ಆತನೇ ...: ಟಬು

ನಾನು   ಏಕಾಂಗಿಯಾಗಲು   ಕಾರಣ...  ಆತನೇ ...:  ಟಬು

ಮುಂಬೈ, ನವೆಂಬರ್ 4:ತಮ್ಮ  ಅಭಿನಯದ ಮೂಲಕ  ಒಂದು ಕಾಲದಲ್ಲಿ    ಬಾಲಿವುಡ್,  ಟಾಲಿವುಡ್ ಪ್ರೇಕ್ಷಕರ   ಹೃದಯ  ಗೆದ್ದಿದ್ದರು  ಅಂದದ   ನಟಿ   ಟಬು.      ಆದರೆ     ಟಬು  ಈವರೆಗೂ  ಮದುವೆಮಾಡಿಕೊಳ್ಳದಿರುವ  ಬಗ್ಗೆ  ಹಲವು  ವದಂತಿಗಳು ಹರಡುತ್ತಲೇ  ಇವೆ.  ಆದರೆ,  ತಾವು  ಒಂಟಿಯಾಗಿಯೇ    ಉಳಿಯಲು  ಬಾಲಿವುಡ್  ನಾಯಕ  ಅಜಯ್ ದೇವ್ ಗನ್ ಕಾರಣ ಎಂದು ಟಬು ಹೇಳಿಕೊಂಡಿದ್ದಾರೆ.

ಬುಧವಾರ ತಮ್ಮ  50 ನೇ ಹುಟ್ಟುಹಬ್ಬ  ಆಚರಿಸಿಕೊಳ್ಳುತ್ತಿರುವ  ಟಬು...  ಸಂದರ್ಶನವೊಂದರಲ್ಲಿ     ವಿವಾಹ ಮಾಡಿಕೊಳ್ಳದೆ  ತಾವು  ಏಕಾಂಗಿಯಾಗಿರುವ  ಬಗ್ಗೆ   ಕೆಲ   ಅಂಶಗಳನ್ನು    ಹಂಚಿಕೊಂಡಿದ್ದಾರೆ.  ಅಜಯ್  ದೇವಗನ್   ಬಗ್ಗೆ ಪ್ರಸ್ತಾಪಿಸಿರುವ  ಆಕೆ...    ಅಜಯ್,    ತಮಗೆ  13,  14 ವರ್ಷ   ವಯಸ್ಸಿನಿಂದಲೂ ಗೊತ್ತು,   ಆತ   ತನ್ನ ಸಹೋದರ  ಸಮೀರ್  ಬಾಲ್ಯದ  ಸ್ನೇಹಿತ  ಎಂದು ಟಬು  ಹೇಳಿಕೊಂಡಿದ್ದಾರೆ.    ಆ ಕಾಲದಲ್ಲಿ   ಮುಂಬೈ  ಜುಹೂ   ಪ್ರದೇಶದಲ್ಲಿ  ನಾವು ಒಟ್ಟಿಗೆ ಬೆಳೆದವರು.  ಅಜಯ್   ಸಮೀರ್   ಬೀದಿ ಬೀದಿಗಲ್ಲಿ  ಗ್ಯಾಂಗ್   ಕಟ್ಟಿಕೊಂಡು ಸುತ್ತಾಡುತ್ತಿದ್ದರು ....  ತನ್ನ  ಸ್ನೇಹಿತೆಯರೊಂದಿಗೆ   ಕೀಟಲೆ ಮಾಡಲು ನಮ್ಮನ್ನು ಹಿಂಬಾಲಿಸುತ್ತಿದ್ದರು ಎಂದು ಅವರು ನೆನಪಿಸಿಕೊಂಡರು.  

ಆ  ಸಮಯದಲ್ಲಿ  ಅಜಯ್ ,  ಸಮೀರ್    ತನ್ನ ಮೇಲೆ   ದೃಷ್ಟಿ ಹರಿಸಿ ....   ಯಾರಾದರೂ ಹುಡುಗರು    ತನ್ನೊಂದಿಗೆ  ಮಾತನಾಡಲು ಪ್ರಯತ್ನಿಸಿದರೆ,  ಅವರಿಗೆ  ಹೊಡೆಯುತ್ತಿದ್ದರು  ಎಂದು ಟಬು ಹೇಳಿದ್ದಾರೆ.  ಈಗ  ಅಜಯ್, ಸಮೀರ್  ತಮ್ಮ ತಮ್ಮ ಕುಟುಂಬಗಳೊಂದಿಗೆ  ಬಿಡುವಿಲ್ಲದೆ  ತೊಡಗಿಸಿಕೊಂಡಿದ್ದಾರೆ. ಆದರೆ ನಾನು   ಹೀಗೆ ಒಬ್ಬಂಟಿಯಾಗಿದ್ದೇನೆ.  ಅದಕ್ಕೆ   ಕಾರಣ ಅಜಯ್ .. ಆಗ  ಆತ  ಮಾಡಿದ್ದು    ಈಗ   ಅವನಿಗೆ ಅರ್ಥವಾಗಿರಬಹುದು  ಎಂದು ಟಬು ನಗುವಿನೊಂದಿಗೆ ನುಡಿದಿದ್ದಾರೆ. 

ಅಷ್ಟೇ ಅಲ್ಲ, ಅಜಯ್   ದೇವಗನ್  ಅವರಿಗೆ    ಟಬು  ಒಂದು  ದಿನ .. ತನ್ನನ್ನು   ಮದುವೆಯಾಗಲು ಯಾರಾದರೂ  ಒಳ್ಳೆ  ಹುಡುಗನಿದ್ದರೆ  ನೋಡು   ಎಂದು   ಹೇಳಿ..  .. ನಂತರ  ತಮ್ಮ  ರಿಲೇಷನ್ ಶಿಪ್   ಕುರಿತು  ಹೇಳುತ್ತಾ... ತಮ್ಮೊಂದಿಗೆ  ಕೆಲಸ ಮಾಡಿದ  ಹೀರೋಗಳ ಪೈಕಿ ಅಜಯ್   ತಮಗೆ ತುಂಬಾ  ಆಪ್ತ .. ಅವರು ತುಂಬಾ  ಪ್ರೊಟೆಕ್ಟೀವ್,  ಆತ ಸೆಟ್‌ನಲ್ಲಿದ್ದರೆ ತುಂಬಾ ಪ್ರಶಾಂತವಾಗಿರುತ್ತದೆ  ಎಂದು ತಬು ಕೊಂಡಾಡಿದ್ದಾರೆ. ಅಜಯ್  ಟಬು ಕಾಂಬೀನೇಷನ್ ನಲ್ಲಿ  ದೇ ದೇ ಪ್ಯಾರ್ ದೇ,  ದೃಶ್ಯಂ, ಗೋಲ್ ಮಾಲ್ ಅಗೈನ್ , ವಿಜಯ್ ಪಥ್  ಹಖೀಖತ್  ಹಿಟ್  ಚಿತ್ರಗಳು ಮೂಡಿಬಂದಿವೆ.

ಅತ್ತ  ಟಾಲಿವುಡ್ ಇತ್ತ  ಬಾಲಿವುಡ್‌ನ ದೊಡ್ಡ ನಾಯಕರೊಂದಿಗೆ  ಲವ್  ಸ್ಟೋರಿ ಚಿತ್ರಗಳಲ್ಲಿ   ಕಾಣಿಸಿಕೊಂಡಿರುವ ಟಬು, ಶಾರುಖ್ ಖಾನ್, ಅಜಯ್ ದೇವ್‌ಗನ್ ಗೆ ಒಳ್ಳೆ ಜೋಡಿ  ಎಂದು   ಜನಪ್ರಿಯರಾಗಿದ್ದರು. ಪ್ರಸ್ತುತ ಮೀರಾ ನಾಯರ್ ನಿರ್ದೇಶನದಲ್ಲಿ    ಮೂಡಿ ಬರುತ್ತಿರುವ   ‘ಸೈದಾ ಭಾಯ್’  ಚಿತ್ರದಲ್ಲಿ  ಟಬು ನಟಿಸುತ್ತಿದ್ದಾರೆ.

ಸುದ್ದಿ ಓದಿ