ವೈಕುಂಠ ದ್ವಾರ ದರ್ಶನದ ಟಿಕೆಟ್ ಬಿಡುಗಡೆ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ
ತಿರುಮಲ, ನ. 27 — ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಡಿಸೆಂಬರ್ 20ರಿಂದ 29ರವರೆಗೆ ನಡೆಯಲಿರುವ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕೆ ಟಿಕೆಟ್ ಮತ್ತು ಟೋಕನ್ ಬಿಡುಗಡೆ ವೇಳಾಪಟ್ಟಿಯನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶುಕ್ರವಾರ ಪ್ರಕಟಿಸಿದೆ.
ಶ್ರೀವಾಣಿ ದರ್ಶನದ ಟಿಕೆಟ್ಗಳನ್ನು ನವೆಂಬರ್ 28ರಂದು ಬೆಳಿಗ್ಗೆ 10ಕ್ಕೆ ಬಿಡುಗಡೆ ಮಾಡಲಾಗುತ್ತದೆ. ₹300ರ ವಿಶೇಷ ಪ್ರವೇಶ ದರ್ಶನದ ಟಿಕೆಟ್ಗಳು ನವೆಂಬರ್ 30ರಂದು ಬೆಳಿಗ್ಗೆ 10ಕ್ಕೆ ಲಭ್ಯವಾಗಲಿವೆ. ದಾನಿಗಳ ಕೋಟಾದ ದರ್ಶನ ಟಿಕೆಟ್ಗಳನ್ನು ಡಿಸೆಂಬರ್ 8ರಂದು ಬೆಳಿಗ್ಗೆ 10ಕ್ಕೆ ಬಿಡುಗಡೆ ಮಾಡಲಾಗುತ್ತದೆ.
ವೈಕುಂಠ ಏಕಾದಶಿ ಮತ್ತು ದ್ವಾದಶಿ ದಿನಗಳಾದ ಡಿಸೆಂಬರ್ 20 ಮತ್ತು 21ರಂದು ನಿಗದಿತ ಸಮಯದ ಸರ್ವದರ್ಶನ (ಎಸ್ಎಸ್ಡಿ) ಟೋಕನ್ಗಳನ್ನು ಆನ್ಲೈನ್ ಲಾಟರಿ (ಇ-ಡಿಪ್) ಮೂಲಕ ಹಂಚಿಕೆ ಮಾಡಲಾಗುತ್ತದೆ. ಇದಕ್ಕಾಗಿ ಡಿಸೆಂಬರ್ 1ರಂದು ಬೆಳಿಗ್ಗೆ 10ರಿಂದ ಡಿಸೆಂಬರ್ 5ರಂದು ಸಂಜೆ 5ರವರೆಗೆ ನೋಂದಾಯಿಸಿಕೊಳ್ಳಬಹುದು. ಡಿಸೆಂಬರ್ 7ರಂದು ಮಧ್ಯಾಹ್ನ 3ಕ್ಕೆ ಟೋಕನ್ಗಳನ್ನು ಹಂಚಿಕೆ ಮಾಡಲಾಗುತ್ತದೆ.
ಹೆಚ್ಚಿನ ಸಂಖ್ಯೆಯಲ್ಲಿ ಸಾಮಾನ್ಯ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲು ಮೊದಲ ಎರಡು ದಿನಗಳ ₹300ರ ವಿಶೇಷ ಪ್ರವೇಶ ದರ್ಶನ ಕೋಟಾವನ್ನು ಟಿಟಿಡಿ ರದ್ದುಗೊಳಿಸಿದೆ. ಈ ಎರಡು ದಿನ ಶಿಷ್ಟಾಚಾರದಡಿ ಬರುವ ಗಣ್ಯರಿಗೆ ಮಾತ್ರ ವಿಐಪಿ ಬ್ರೇಕ್ ದರ್ಶನಕ್ಕೆ ಅವಕಾಶವಿರಲಿದೆ.
ಭಕ್ತರು ದರ್ಶನದ ಟಿಕೆಟ್ ಮತ್ತು ಟೋಕನ್ಗಳನ್ನು ಟಿಟಿಡಿಯ ಅಧಿಕೃತ ವೆಬ್ಸೈಟ್ ಮೂಲಕವೇ ಕಾಯ್ದಿರಿಸುವಂತೆ ಮನವಿ ಮಾಡಲಾಗಿದೆ. ಟಿಟಿಡಿ ಅಧಿಕೃತ ವೆಬ್ಸೈಟ್