ಉಪ ನೋಂದಣಿ ಕಚೇರಿ ಯಲ್ಲಿ ಹಣ ಸುಲಿಗೆಗೆ ಕಡಿವಾಣ
ತಾಪಂ ಕೆಡಿಪಿ ತ್ರೈಮಾಸಿಕ ಪ್ರಗತಿ ಪರೀಶೀಲನಾ ಸಭೆ
ಹೂವಿನಹಡಗಲಿ 20: ಇಲ್ಲಿನ ಉಪ ನೋಂದಣಿ ಕಚೇರಿಯಲ್ಲಿ ನಡೆಯುತ್ತಿರುವ ಹೆಚ್ಚುವರಿ ಹಣ ಸುಲಿಗೆ ಮಾಡದಂತೆ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ಶಾಸಕ ಎಲ್. ಕೃಷ್ಣನಾಯ್ಕ ನೀಡಿದರು.
ಪಟ್ಟಣದ ತಾಪಂ ಕೆಡಿಪಿ ತ್ರೈಮಾಸಿಕ ಪ್ರಗತಿ ಪರೀಶೀಲನಾ ಸಭೆಯಲ್ಲಿ ಬುಧವಾರ ಅವರು ಮಾತನಾಡಿಈ ಬಾರಿ ಅತಿ ಹೆಚ್ಚುಮಳೆ ಆಗಿರುವುದರಿಂದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಸಮೀಕ್ಷೆ ಮಾಡಿ ರೋಗ ಹತೋಟಿ ಕ್ರಮಗಳ ಬಗ್ಗೆ ರೈತ ರಿಗೆ ಮಾಹಿತಿ ಕೊಡಿ ಜತೆಗೆ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಮರ್ಕ ಬಿತ್ತನೆ ಬೀಜ ಪೂರೈಕೆ ಜತೆಗೆ ಹೆಚ್ಚಿನ ದರದಲ್ಲಿ ಬೀಜ.ಗೊಬ್ಬರ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಲು ಶಾಸಕ ಎಲ್. ಕೃಷ್ಣನಾಯ್ಕ ಸೂಚಿಸಿದರು. ಆರೋಗ್ಯ ಇಲಾಖೆಗೆ ಅಧಿಕಾರಿಗಳಿಗೆ ಸೂಚನೆ ನೀಡಿ ಸರಿಯಾದ ಸಮಯಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಜರಿರಬೇಕು. ರೋಗಿಗಳ ಸಮಸ್ಯೆಗೆ ಶೀಘ್ರ ಸ್ಪಂದಿಸಿ ಕ್ಷಯ ರೋಗದ ಬಗ್ಗೆ ಅರಿವನ್ನು ಮೂಡಿಸುವಂತಹ ಕೆಲಸವನ್ನು ಮಾಡಬೇಕು ಎಂದರು.. ಹಕ್ಕಂಡಿ.ಹಂಪಸಾಗರ ಆಸ್ಪತ್ರೆ ಮತ್ತು ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಸ್ವಚ್ಛತೆ ಕಾಪಾಡಬೇಕು . ಪ್ರಾಥಮಿಕ ಆರೋಗ್ಯ ಕೇಂದ.ಪಶು ಆಸ್ಪತ್ರೆ. ಸಿಬ್ಬಂದಿ ಕೊರತೆ ಬಗ್ಗೆ ಮಾಹಿತಿ ಕೊಡಿ ಎಂದರು. ಘೋಷಣೆಯಾದ ಕಂದಾಯ ಗ್ರಾಮಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನೀರೀಕ್ಷಕರು ರೈತರ ಭೂಮಿಯನ್ನು ಸರ್ವೆ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಹಕ್ಕುಪತ್ರ ನೀಡಿದ ಕುರಿತು ವರದಿ ನೀಡುವಂತೆ ಸೂಚಿಸಿದರು. ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಮತ್ತಿತರ ಇಲಾಖೆ ಅಧಿಕಾರಿಗಳು ಇಲಾಖಾವಾರು ಪ್ರಗತಿ ವರದಿ ಸಲ್ಲಿಸಿದರು.
ಹಗರಿಬೊಮ್ಮನಹಳ್ಳಿಯ ಕೃಷಿ ಅಧಿಕಾರಿ ಸುನಿಲ್ ನಾಯ್ಕ, ತಾಲೂಕು ದಂಡಾಧಿ ಕಾರಿ ಅಮರೇಶ್, ಅಶೋಕ ತೋಟದ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಉಮೇಶ್, ಹಗರಿಬೊಮ್ಮನಹಳ್ಳಿಯ ತಾಪಂ ಇಒ ರಮೇಶ್, ತಾಲೂಕು ಮಟ್ಟದ ಎಲ್ಲ ಸರ್ಕಾರಿ ಇಲಾಖೆಯ ಅಧಿಕಾರಿಗಳು ಪ್ರಗತಿ ಪರೀಶೀಲನೆ ಕುರಿತು ಮಾಹಿತಿ ಹಂಚಿ ಕೊಂಡರು