ಹೂವಿನ ಹಡಗಲಿ

ಸವಿ ನೆನಪು: ಗುರು ವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಸವಿ ನೆನಪು: ಗುರು ವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಹೂವಿನ ಹಡಗಲಿ16:  ತಾಲೂಕಿನ ಸೋಗಿ ಗ್ರಾಮದಲ್ಲಿ1989 -92 ರ ಅವಧಿಯಲ್ಲಿ ಪಟ್ಟಿ ಸಿದ್ದ ಮಲ್ಲಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ   ಅಭ್ಯಾಸ ಮಾಡಿದ ಸವಿ ನೆನಪಿಗಾಗಿ ಭಾನುವಾರ ಗುರು ವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಗುರುಗಳಾದ ಸಿ ಚನ್ನಬಸಪ್ಪ. ಎಸ್ ಎಮ್ ಕೊಟ್ರಯ್ಯ. ತಳಕಲ್ ಕೊಟ್ರ​‍್ಪ. ಮತ್ತು ಶಾಯಿದಾ ಬೇಗಮ್  ರವರಿಗೆ ಸನ್ಮಾನ ಮಾಡಲಾಗಿತ್ತು . 

ಈ ಶಾಲೆಯ ಮುಖ್ಯ ಗುರುಗಳು ಹಾಗೂ 1989- 92ರ ಅವಧಿಯ ಹಳೆಯ ವಿದ್ಯಾರ್ಥಿ ಯಾದ ಕಡ್ಲಿ ಗುರು ಬಸವರಾಜ್ ಅಧ್ಯಕ್ಷತೆಯನ್ನು ವಹಿಸಿದ್ದರು . ತಾಲ್ಲೂಕು ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ  ಅದ್ಯಕ್ಷ ಯು.ಆನಂದ. ಸದರಿ ಪ್ರೌಢಶಾಲೆಯ ಶಿಕ್ಷಕ ಜಿಎಸ್‌ಎಮ್ ಕೊಟ್ರೇಶ್ ಸ್ವಾಗತಿಸಿದರು. ಭಾರತಿ. ಎಸ್ ಮಾದೇವ್ ನಿರೂಪಿದರು. ಈ ಸಂದರ್ಭದಲ್ಲಿ  ಅವಧಿಯ ಹಳೆ ವಿದ್ಯಾರ್ಥಿಗಳಾದ ಕುರಿ ದೇವರ​‍್ಪ. ಎಂಬಿ ಬಸವರಾಜ್‌. ಕೆ ಬಿ ದೇವಿಂದ್ರ. ಗಡ್ಡಿ  ಭಾರತಿ. ಕೆ ಬಿ ಶಾಂತ.ಸವಿತ ಇದ್ದರು. ಇದಕ್ಕೂ ಮುನ್ನ ನಿವೃತ್ತ ಶಿಕ್ಷಕರನ್ನು ಊರಿನಲ್ಲಿ ಮೆರವಣಿಗೆ ಮಾಡಲಾಯಿತು 


ಸುದ್ದಿ ಓದಿ