ಸ್ವಚ್ಛತಾ-ಹಿ-ಸೇವಾ ಕಾರ್ಯಕ್ರಮ
ಧಾರವಾಡ 01: ಜೆ.ಎಸ್.ಎಸ್ ಕೆ. ಹೆಚ್. ಕಬ್ಬೂರ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವತಿಯಿಂದ ಸ್ವಚ್ಛತಾ-ಹಿ-ಸೇವಾ 2024 ಕಾರ್ಯಕ್ರಮದ ಅಂಗವಾಗಿ ಸ್ವಚ್ಛತೆಯ ಕುರಿತು ನಗರದ ದಾನೇಶ್ವರಿನಗರ ಮತ್ತು ವಿದ್ಯಾಗಿರಿಯ ಭಾಗದಲ್ಲಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಈ ಜಾಥಾದಲ್ಲಿ ಜನತಾ ಶಿಕ್ಷಣ ಸಮಿತಿಯ ಮಾನ್ಯ ಕಾರ್ಯದರ್ಶಿಗಳಾದ ಡಾ. ಅಜಿತ್ ಪ್ರಸಾದ್ ರವರು, ಐಟಿಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾಧ್ಯೆಯವರು, ಕೆ.ಹೆಚ್. ಕಬ್ಬೂರ ಪಾಲಿಟೆಕ್ನಿಕ್ನ ಪ್ರಾಚಾರ್ಯೆ ವೇದಾವತಿ ಆರ್. ತಿವಾರಿ ಅವರು, ಪ್ರೊ. ಶಿವಾನಂದ ಶಂಬುಜಿ, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಈರ್ಪ ಪತ್ತಾರ್ ವಸಂತ ಐಹೊಳೆ ಹಾಗೂ ಶಿವರಾಜ ಧಾನವಾಡಕರ. ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಬೋಧಕ, ಭೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.