ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ: ರಾಜ್ಯ ಜಿಲ್ಲಾ ಸಮಿತಿ ಸಭೆ
ರಾಣೇಬೆನ್ನೂರು 18: ಇಲ್ಲಿನ ಮೆಡ್ಲೇರಿ ರಸ್ತೆಯ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮತ್ತು ಜಿಲ್ಲಾ ಸಮಿತಿ ಸಭೆ ನಡೆಯಿತು. ನೂರಾರು ಪದಾಧಿಕಾರಿಗಳು ಪಾಲ್ಗೊಂಡಿದ್ದ, ಮಹತ್ವದ ಸಭೆಯಲ್ಲಿ, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಸಿ, ನೇಮಕಗೊಳಿಸಲಾಯಿತು.
ನೂತನ ಕಾರ್ಯದರ್ಶಿ ಅವರಿಗೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಅವರು, ಸಂಘಟನೆಯ ಧ್ವಜವನ್ನು ಹಸ್ತಾಂತರಿಸಿ, ಭವಿಷ್ಯದ ದಿನಗಳಲ್ಲಿ ನೂತನ ಕಾರ್ಯದರ್ಶಿಗಳು, ಸಂಘಟನೆಯ ಪ್ರಗತಿ, ಮತ್ತು ಅಭಿವೃದ್ಧಿಗೆ ಹಾಗೂ ಸಾಮಾಜಿಕ ಹೋರಾಟಕ್ಕೆ ಮುಂದಾಗಿ, ಜನಪರ ಧ್ವನಿಯಾಗಿ ಸೇವೆ ಸಲ್ಲಿಸಲು ಮುಂದಾಗಬೇಕೆಂದು ಕರೆ ನೀಡಿದರು. ಸಭೆಯಲ್ಲಿ ಸಂಘಟನೆಯ ಹಿರಿಯ ಮುಖಂಡರಾದ, ಸಿದ್ದಾರೋಡ ಗುರುಂ, ಕೆ.ಸಿ. ನಾಗರಜ್ಜಿ, ರಾಮಣ್ಣ ನಾಯಕ್, ನಾಗರಾಜ ಮಾಕನೂರ, ರಮೇಶ್ ಜಾಧವ, ಸಂಜೀವ್ ಕನವಳ್ಳಿ, ಭಾಷಾ ಹಂಪಾಪಟ್ಟಣ, ಭಾಷಾ ಮತ್ತೂರ, ಗೋಪಿ ಕುಂದಾಪುರ, ಚಂದ್ರು ಕಡ್ಲಿಗುಂದಿ, ಚಂದ್ರ್ಪ ಬತ್ತಿಕೊಪ್ಪ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಮುಖಂಡರು ಪಾಲ್ಗೊಂಡಿದ್ದರು