ಧಾರವಾಡ - ಹುಬ್ಬಳ್ಳಿ

ಸುವರ್ಣಾದೇವಿ ಅಪ್ಪಾಸಾಹೇಬ ದೇಸಾಯಿ ನಿಧನ

ಸುವರ್ಣಾದೇವಿ ಅಪ್ಪಾಸಾಹೇಬ ದೇಸಾಯಿ ನಿಧನ

ಧಾರವಾಡ 27 : ತಾಲೂಕಿನ ನರೇಂದ್ರ ಗ್ರಾಮದ ಪ್ರತಿಷ್ಠಿತ ದೇಸಾಯಿ ಮನೆತನದ ಸುವರ್ಣಾದೇವಿ ಅಪ್ಪಾಸಾಹೇಬ ದೇಸಾಯಿ ಸೋಮವಾರ (ಆಗಸ್ಟ್‌ 26) ರಂದು, ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. 

ಮಂಗಳವಾರ (ಆಗಸ್ಟ್‌ 27) ರಂದು, ನರೇಂದ್ರ ಗ್ರಾಮದ ದೇಸಾಯರ ತೋಟದಲ್ಲಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ಜರುಗಿತು. 

ಮಾಜಿ ಶಾಸಕರಾದ ಎ.ಬಿ.ದೇಸಾಯಿ, ಅಮೃತ ದೇಸಾಯಿ ಹಾಗೂ ಅರವಿಂದ ದೇಶಮುಖ ನಾಲತವಾಡ ಸೇರಿದಂತೆ, ಅನೇಕ ಗಣ್ಯರು, ದೇಸಾಯಿನಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 


ಸುದ್ದಿ ಓದಿ