ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗಕ್ಕೆ ಸುರೇಶ ಅಂಗಡಿ ಅದ್ಯಕ್ಷ
ಹೂವಿನ ಹಡಗಲಿ: ಇಲ್ಲಿನ ಬೀಚಿಗ್ರಂಥಾಲಯ ಬೆಂಬಲಿಗರ ಬಳಗದ ನೂತನ ಅಧ್ಯಕ್ಷರಾಗಿ ಸುರೇಶ ಅಂಗಡಿ ಆಯ್ಕೆ ಆಗಿದ್ದಾರೆ. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಬೀಚಿ ಬಳಗದ ಸದಸ್ಯರ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಉಪಾಧ್ಯಕ್ಷರಾಗಿ ಕೊಟ್ರೇಶ್ ಹೊಂಬಾಳೆ. ಗೌರವ ಕಾವ್ಯದರ್ಶಿಯಾಗಿ ನಾಗರಾಜ್ ಮಲ್ಟಿಒಡೆಯರ್, ಕೋಶಾಧ್ಯಕ್ಷರಾಗಿ ಮಂಜುನಾಥ ಬೋವಿ, ಸಂಘಟನಾ ಕಾರ್ಯದರ್ಶಿಯಾಗಿ ಬಿಚ್ಚುಗತ್ತಿ ಖಾಜಾ ಹುಸೇನ್ ಆಯ್ಕೆ ಆಗಿದ್ದಾರೆ. ಹಾಲಿ ಅಧ್ಯಕ್ಷ ದ್ವಾರಕೀಶ್ ರೆಡ್ಡಿನೂತನ ಅಧ್ಯಕ್ಷರಾದ ಸುರೇಶ ಅಂಗಡಿ ರವರಿಗೆ ಶುಭ ಹಾರೈಸಿದರು.ಬೀಚಿ ಬಳಗದ ಹಿರಿಯರಾದ ಬೀರಬ್ಬಿ ಬಸವರಾಜ,ಹುಲುಗಪ್ಪ ಬೋವಿ, ಎಂ ಪಿ ಎಂ ಪಕ್ಕೀರಗೌಡ, ಶಂಕರ್ ಬೆಟಗೇರಿ, ಎ ಕೊಟ್ರಗೌಡ, ಕೋರಿ ಹಾಲೇಶ್, ಎಲ್ ಖಾದರಬಾಷಾ, ಜಿಲಾನ್, ಚಂದ್ರಪ್ಪ A ಸಿದ್ದೇಶ್, ಕೊಟ್ರಯ್ಯ ಇತರರು ಉಪಸ್ಥಿತರಿದ್ದರು. ನಿರ ದಯಾನಂದ