ಇಂಡಿ

ಸುನಂದಾ ಹಣಮಂತ ಬಿರಾದಾರ ಅವಿರೋಧವಾಗಿ ಆಯ್ಕೆ

ಸುನಂದಾ ಹಣಮಂತ ಬಿರಾದಾರ ಅವಿರೋಧವಾಗಿ ಆಯ್ಕೆ

ಇಂಡಿ 04: ತಾಲ್ಲೂಕಿನ ಬಬಲಾದ ಗ್ರಾಮ ಪಂಚಾಯತ್‌ಗೆ ಶನಿವಾರ ನೂತನ ಅಧ್ಯಕ್ಷರಾಗಿ ಸುನಂದಾ ಹಣಮಂತ ಬಿರಾದಾರ ಅವಿರೋಧವಾಗಿ ಆಯ್ಕೆಯಾದರು. 

ನೀಲಾಂಬಿಕೆ ಭುಯ್ಯಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಪ್ರಯುಕ್ತ ಚುನಾವಣೆ ಪ್ರಕ್ರಿಯೆ  ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸುನಂದಾ ಹಣಮಂತ ಬಿರಾದಾರ ಒಬ್ಬರೇ ಸ್ಪರ್ಧೆ ಮಾಡಿದ್ದರಿಂದ ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿ ತಾ. ಪಂ ಇಓ ಸುನೀಲ್ ಮದ್ದಿನ್ ಘೋಷಿಸಿದರು. 

13 ಸದಸ್ಯ ಬಲ ಹೊಂದಿದ ಪಂಚಾಯತ್‌ಗೆ ಚುನಾವಣೆ ಪ್ರಕ್ರಿಯೆಯಲ್ಲಿ 8 ಸದಸ್ಯರು ಪಾಲ್ಗೊಂಡಿದ್ದರು. 

ಈ ಸಂದರ್ಭದಲ್ಲಿ ಪಿಡಿಓ ಎಸ್‌.ಡಿ. ಬಿರಾದಾರ, ಸುನಿಲಗೌಡ ಬಿರಾದಾರ, ಶ್ರೀಶೈಲ ಮಾದರ, ಶಾಂತಾಬಾಯಿ ನಾಟೀಕಾರ, ನೀಲಾಂಬಿಕೆ ಭುಯ್ಯಾರ, ನೀಲವ್ವ ದಶವಂತ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ