ಹೂವಿನ ಹಡಗಲಿ

ಹಿರೇಹಡಗಲಿ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ: ದರ್ಶನಕ್ಕೆ ಭಕ್ತರ ದಂಡು

ಹಿರೇಹಡಗಲಿ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ: ದರ್ಶನಕ್ಕೆ ಭಕ್ತರ ದಂಡು

ಲೋಕದರ್ಶನ ವರದಿ 


ಹೂವಿನಹಡಗಲಿ.ಮಾ.21- ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಮಂಗಳವಾರ ಕಟ್ಟೆಬಸವೇಶ್ವರ ಪುರಾತನ ದೇಗುಲದ ಕಟ್ಟಿ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶಿಸಿದ ಹಿನ್ನೆಲೆಯಲ್ಲಿ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ಪ್ರತಿವರ್ಷ ಯುಗಾದಿ ಅಮವಾಸೆ ದಿನ  ಬೆಳಿಗ್ಗೆ ಸೂರ್ಯನ ಕಿರಣಗಳು ಶಿವಲಿಂಗ 1ನಿಮಿಷಗಳ ಕಾಲ ಬೀಳುತ್ತದೆ ಎಂದ ನಂಬಿಕೆ ಇಟ್ಟುಕೊಂಡಿದ್ದಾರೆ. 

ಇಂದು ಬೆಳಗಿನ ಜಾವ ಒಂದು ನಿಮಿಷಗಳ ಕಾಲ ಲಿಂಗದ ಮೇಲೆ ಸೂರ್ಯನ ಕಿರಣಗಳು ಬಿದ್ದಿದ್ದು,ಪೋಟೋ ವೈರಲ್ ಆಗುತ್ತಿದ್ದಂತೆ ದೇವಸ್ಥಾನಕ್ಕೆ ಭಕ್ತರ ದಂಡು ಆಗಮಿಸುತ್ತಿದ್ದು,ಶಿವಲಿಂಗ ದರ್ಶನ ಪಡೆಯಲು ಮುಂದಾಗುತ್ತಿದ್ದಾರೆ.ಭಾಸ್ಕರನು ಶಿವಲಿಂಗವನ್ನು ಸ್ಪರ್ಶಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇದೀಗ ಸಾಮಾಜಿಕ ಜಾಲತಾಣದಲ್ಲೂ ಪೋಟೋಗಳು ಹರಿದಾಡುತ್ತಿವೆ.ಗ್ರಾಮದ ಕಟ್ಟೆಬಸವೇಶ್ವರ ದೇವಸ್ಥಾನದ ಕಟ್ಟಿ ಶಿವಲಿಂಗ ಪುರಾತನವಾದ ಚಾಲುಕ್ಯರ ಕಾಲದ ದೇಗುಲ ಇದಾಗಿದೆ ಎನ್ನಲಾಗಿದೆ. 


ಸುದ್ದಿ ಓದಿ