ಕಾಗವಾಡ

ಸುಮೇರು ಅರ್ಬನ್ ಕೋ-ಆಪ್ ಸೊಸೈಟಿ ಶಾಖೆ ಉದ್ಘಾಟನೆ

ಸುಮೇರು ಅರ್ಬನ್ ಕೋ-ಆಪ್ ಸೊಸೈಟಿ ಶಾಖೆ ಉದ್ಘಾಟನೆ

ಶೇಡಬಾಳ 26: ಶೇಡಬಾಳ ಪಟ್ಟಣದ ಸುಮೇರು ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ 3ನೇ ಶಾಖೆಯನ್ನು ಶಿರಗುಪ್ಪಿ ಗ್ರಾಮದಲ್ಲಿ ಸೋಮವಾರ ದಿ. 26 ರಂದು ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿರಗುಪ್ಪಿ ದಿಗಂಬರ ಜೈನ ಸಮಾಜದ ಅಧ್ಯಕ್ಷ ಮಹಾವೀರ ಕಾತ್ರಾಳೆ ಅವರು ಲಕ್ಷ್ಮೀ-ಸರಸ್ವತಿ ದೇವಿಯ ಹಾಗೂ ಸುಮೇರು ಮುನಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ನೂತನ ಶಾಖೆಯನ್ನು ಉದ್ಘಾಟಿಸಿ

ಮಾತನಾಡುತ್ತ ಸುಮೇರು ಮುನಿ ಮಹಾರಾಜರ ಹೆಸರಿನಲ್ಲಿ ಸ್ಥಾಪನೆಗೊಂಡಿರುವ ಈ ಸಂಸ್ಥೆಯು ಸುಮೇರು ಪರ್ವತದಂತೆ ಎತ್ತರವಾಗಿ ಬೆಳೆದು, ಈ ಭಾಗದ ಸಾರ್ವಜನಿಕರ ಆರ್ಥಿಕ  ಅಭಿವೃದ್ಧಿಗೆ ಸಹಕರಿಸಿ, ಸಂಸ್ಥೆಯು ಸರ್ವಾಂಗೀಣ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಸನ್ಮತಿ ಉಪಾಧ್ಯೆ ಅವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ನೂತನವಾಗಿ ಪ್ರಾರಂಭಗೊಂಡ ಶಾಖೆಯಲ್ಲಿ ಅಧಿಕ ಸಂಖ್ಯೆಯ ಗ್ರಾಹಕರು ತಮ್ಮ ಹಣವನ್ನು ಠೇವಣಿ ರೂಪದಲ್ಲಿ ಪಾವತಿಸಿದರು. ಸಂಸ್ಥೆಯ ವತಿಯಿಂದ ಗಣ್ಯ-ಮಾನ್ಯರನ್ನು ಸತ್ಕರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಸನ್ಮತಿ ಗಣೆ, ಉಪಾಧ್ಯಕ್ಷ ಚಂದ್ರಶೇಖರ ವಡ್ರಾಳೆ, ಬಾಹುಬಲಿ ಗಣೆ, ವ್ಯವಸ್ಥಾಪಕ ಪ್ರದೀಪ ಬರಗಾಲೆ, ಶಾಖೆಯ ಆಡಳಿತ ಮಂಡಳಿಯ ಸದಸ್ಯರಾದ ಮೋಹನ ಮೊನೆ, ಶೀತಲ ಶಿರಗುಪ್ಪೆ, ಶ್ರೇಣಿಕ ಕಾತ್ರಾಳೆ, ಅರುಣ ಕುರುಂದವಾಡೆ, ಅನೀಲ ಶಹಾಪೂರೆ, ವರ್ಧಮಾನ ಚೌಗುಲೆ, ಅಭಯ ಚೌಗುಲೆ, ಕಿರಣ ಭೋಲೆ, ರಾವಸಾಬ ಪಾಟೀಲ, ಮೇಘಾ ಚೌಗುಲೆ, ಸರೋಜನಿ ಮೈಶಾಳೆ, ಮುಖಂಡರಾದ ಸುರೇಶ ಚೌಗುಲೆ, ಆರ್.ಎಸ್. ಪಾಟೀಲ, ಅಪ್ಪಾಸಾಬ ಕುರುಂದವಾಡೆ, ವಿಜಯ ಅಕಿವಾಟೆ, ತಾತ್ಯಾಸಾಬ ಪಾಟೀಲ, ಅಪ್ಪಾಸಾಬ ತಮದಡ್ಡಿ, ಬಾಳಾಸಾಬ ಧಾರವಾಡೆ, ಪ್ರದೀಪ ಮಗದುಮ್, ಅಶೋಕ ಕಾತ್ರಾಳೆ, ಕುರುಂದವಾಡೆ ಸರ್, ಪ್ರಕಾಶ ಅಕಿವಾಟೆ, ತಾತ್ಯಾಸಾಬ ಚೌಗುಲೆ, ಸುಭಾಷ ಮೊನೆ, ಪಾರೀಸಾ ಧನಗೌಡರ, ಪ್ರಕಾಶ ಅಸ್ಕಿ, ಜಿನೇಂದ್ರ ಮುರಗುಂಡೆ, ಶಶಿಕಾಂತ ಸಾವಡಕರ ಸೇರಿದಂತೆ ಎಲ್ಲ ಶಾಖೆಗಳ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು. ಶಹಾಪೂರೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು 

ಸುದ್ದಿ ಓದಿ