ಧಾರವಾಡ - ಹುಬ್ಬಳ್ಳಿ

ಸುಕುಮಾರ ಕೊಕಟನೂರಗೆ ಪಿಎಚ್‌ಡಿ ಪದವಿ ಪ್ರದಾನ

ಸುಕುಮಾರ ಕೊಕಟನೂರಗೆ ಪಿಎಚ್‌ಡಿ ಪದವಿ ಪ್ರದಾನ

ಧಾರವಾಡ 10: ಇಲ್ಲಿಯ ಜೆ.ಎಸ್‌.ಎಸ್‌. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗದಲ್ಲಿ ಪ್ರಸ್ತುತ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಸುಕುಮಾರ ಎ. ಕೊಕಟನೂರ ಅವರು ‘ಎನ್ವಿರಾನಮೆಂಟಲ್ ಇಂಪ್ಯಾಕ್ಟ್‌ ಆಫ್ ಲೈಮಸ್ಟೊನ್ ಕ್ವ್ಯಾರಿಯಿಂಗ್ ಆ್ಯಂಡ್ ಸಿಮೆಂಟ್ ಮ್ಯಾನುಫ್ಯಾಕ್ಚರಿಂಗ್ ಎ ಕೇಸ್ ಸ್ಟಡಿ ಆಫ್ ಬಾಗಲಕೋಟ ಡಿಸ್ಟ್ರಿಕ್ಟ್‌, ಕರ್ನಾಟಕ ಸ್ಟೇಟ್‌” ಎಂಬ ವಿಷಯ ಕುರಿತು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ಪ್ರಬಂಧಕ್ಕೆ ಪಿಎಚ್‌ಡಿ ಪದವಿಯನ್ನು ಪ್ರಧಾನ ಮಾಡಿದೆ.  

ಇವರಿಗೆ ಡಾ. ವ್ಹಿ.ಬಿ. ಸಾವಿರಮಠ, ಪ್ರಾಧ್ಯಾಪಕರು, ಭೂಗೋಳಶಾಸ್ತ್ರ ವಿಭಾಗ, ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ, ಧಾರವಾಡ ಅವರು ಮಾರ್ಗದರ್ಶಕರಾಗಿದ್ದರು.  

ಸುಕುಮಾರ ಎ. ಕೊಕಟನೂರ ಅವರನ್ನು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತಪ್ರಸಾದ, ಪ್ರಾಚಾರ್ಯರಾದ ಡಾ. ಕೆ.ಎಚ್‌. ನಾಗಚಂದ್ರರವರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ