ಲಸಿಕಾ ಅಭಿಯಾನ ಯಶಸ್ವಿ
ಗೋಕಾಕ 02 : ಸ್ಥಳೀಯ ಪ್ರತಿಷ್ಠಿತ ಜೆ. ಎಸ್. ಎಸ್. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ವಿವಿಧ ಘಟಕ ರೆಡ್ ಕ್ರಾಸ್, ಎನ್.ಎಸ್.ಎಸ್., ಎನ್.ಸಿ.ಸಿ., ರೇಂಜರ್ ರೋವರ್ಸ ಸ್ಕೌಟ್ಸ್ ಮತ್ತು ಋಂಅ ಘಟಕಗಳ ಅಡಿಯಲ್ಲಿ, ಗೋಕಾಕ ತಾಲ್ಲೂಕಾ ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಸಹಯೋಗದೊಂದಿಗೆ, ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಹಿವಿದ್ಯಾರ್ಥಿನಿಯರಿಗೆ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರಿಗೆ ಕೋವಿಡ್-19ರ ಲಸಿಕಾ ವಿತರಣಾ ಅಭಿಯಾನವನ್ನು ಜು.01ಮತ್ತು ಜು,02ರಂದು ಹಮ್ಮಿಕೊಳ್ಳಲಾಯಿತು ಮತ್ತು ಎಲ್ಲರಿಗೂ ಲಸಿಕೆಯನ್ನು ಹಾಕಲಾಯಿತು.
ಈ ಕಾರ್ಯಕ್ರಮದಲ್ಲಿ ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಚೇರಮನ್ನ ವ್ಹಿ. ಎ. ಕಡಕೋಳರವರು, ವಿಶ್ವಸ್ಥ ಮಂಡಳಿಯ ಚೇರಮನ್ನ ಡಾ.ಯು. ಬಿ. ಆಜರಿಯವರು, ಕಾರ್ಯದರ್ಶಿ ಆರ್. ಎಂ. ವಾಲಿಯವರು, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆಶಾಲತಾ ಎಸ್. ತೇರದಾಳರವರು, ಉಪ-ಪ್ರಾಚಾರ್ಯ ಡಾ. ಆರ್. ಎಸ್. ಬಳಿಗಾರವರು ಉಪಸ್ಥಿತರಿದ್ದರು. ಕೋವಿಡ್ ನೋಡಲ್ ಅಧಿಕಾರಿ ಎ. ಕೆ. ಕಿಳ್ಳಿಕೇತ, ಋಂಅ ಸಂಯೋಜಕ ಪ್ರೊ. ಆರ್. ಎಮ್. ಮಹೇಂದ್ರಕರ, ಎನ್.ಎಸ್.ಎಸ್. ಘಟಕದ ಅಧಿಕಾರಿ ಡಾ. ಎನ್. ಎಲ್. ತೇರದಾಳ, ಪ್ರೊ. ಎಂ. ವ್ಹಿ. ಗೊರಗುದ್ದಿ, ಎನ್.ಸಿ.ಸಿ. ಘಟಕದ ಅಧಿಕಾರಿ ಪ್ರೊ. ಕನಕರಾಜ ಟಿ. ಎಮ್., ಮಹಿಳಾ ರೆಡ್ ಕ್ರಾಸ್ ಘಟಕದ ಅಧಿಕಾರಿ ಪ್ರೊ. ಜ್ಯೋತಿ ಪೋಲಾಶಿ, ರೋವರ್ ಸ್ಕೌಟ್ಸ್ ಲೀಡರ ಡಾ. ವ್ಹಿ. ಬಿ. ಪಲೋಟಿ, ಪ್ರೊ. ವ್ಹಿ. ಸಿ. ಹುಣಚ್ಯಾಳಿ, ಪ್ರೊ. ಅರುಣ ಪಾಟೀಲ, ಪ್ರೊ. ಬಿ. ಎಚ್. ಸ್ವಾಮಿ, ಪ್ರೊ. ಶ್ರೀಮತಿ. ರೇಣು ಝಂವರ, ಪ್ರೊ. ಕು. ತೇಜಲ್ ಬಿದರಿ ಮತ್ತು ಇನ್ನುಳಿದ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲಾಯಿತು.