ನಿರಂತರ ಕಲಿಕೆಯಿಂದ ಯಶಸ್ಸು ಸಾಧ್ಯ : ರಮೇಶ್ ಪತ್ತಾರ್
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ. ಮಾ.21: ಸಂಗೀತ ಕಲಿಯುವುದು ಅಷ್ಟು ಸುಲಭವಾದ ಮಾರ್ಗವಲ್ಲ, ದಿನಂಪ್ರತಿ ಪರಿಶ್ರಮದಿಂದ ಕಲಿಕೆ ನಿರಂತರವಾದಾಗ ಮಾತ್ರ ಸಂಗೀತವನ್ನು ಕಲಿಯಲು ಸಾಧ್ಯ ಎಂದು ಸಂಗೀತ ಕಲಾವಿದ ರಮೇಶ್ ಪತ್ತಾರ್ ಹೇಳಿದರು.
ಪಟ್ಟಣದ ಕೆ.ವಿ.ಒ.ಆರ್ ಕಾಲೋನಿಯ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವಿಶೇಷ ಘಟಕ ಯೋಜನೆ ಅಡಿಯಲ್ಲಿ ಸಂಗೀತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಂದು ಕಲಿಕೆಯಲ್ಲಿ ಶ್ರಧ್ಧೆ, ಭಕ್ತಿಯಿಂದ ಕಲಿತರೆ ಮಾತ್ರ ಒಲಿಯುತ್ತದೆ, ಸಂಗೀತ ಕಲಿಕೆ ಎಂಬುದು ನಿರರ್ಗಳ ಕಲಿಕೆಯಿಂದ ಮಾತ್ರ ಯಶಸ್ಸು ಲಭಿಸುಸತ್ತದೆ, ಆ ನಿಟ್ಟಿನಲ್ಲಿ ಇಂತಹ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿರುವುದು ಮಕ್ಕಳಿಗೆ ತುಂಬ ಲಾಭದಾಯಕ ಸಂಗೀತದಿಂದ ಮನಸ್ಸಿನಲ್ಲಿ ನೆಮ್ಮದಿಯನ್ನು ಕಾಣಬಹುದಾಗಿದೆ ಎಂದರು.
ಬಿ.ಇ.ಓ ಕಛೇರಿಯ ಅಧೀಕ್ಷಕರಾದ ಪ್ರತಾಪ್ ಮಿತ್ರ ಮಾತನಾಡಿ ಇವತ್ತಿನ ದಿನಮಾನಗಳಲ್ಲಿ ಸಂಗೀತಕ್ಕೆ ಯುವಕರು ಗಮನವನ್ನು ಕೊಡುವುದು ಕಡಿಮೆಯಾಗಿದೆ. ಮೋಬೈಲ್ ಗೀಳಿನಿಂದ ಆಚೆಗೆ ಒಂದು ಸಂಗೀತ ಸ್ವಾದ ಸವಿದರೆ ಮನಸ್ಸಿಗೆ ವಿನೂತನ ಹುರುಪು ನೀಡಿದಂತಾಗುತ್ತದೆ, ಇಂತಹ ತರಬೇತಿ ಶಿಬಿರ ಮಕ್ಕಳಿಗೆ ಆಯೋಜನೆ ಮಾಡಿರುವುದು ಸಂಗೀತ ಕಲಿಕೆಗೆ ತುಂಬಾ ಅನುಕೂಲ ಎಂದರು.
ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಶಬೀರ್, ಶಾಲೆಯ ಮುಖ್ಯ ಗುರುಗಳಾದ ಶಂಕ್ರಮ್ಮ ಹಾಗೂ ಶಿಕ್ಷಕ ಮಂಜುನಾಥ, ರವಿ, ಸಂಗೀತ ಶಿಕ್ಷಕ ಸಿ.ನವೀನ ಉಪಸ್ಥಿತರಿದ್ದರು. ರವಿ ನಿರೂಪಿಸಿದರು. ನಾಗರಾಜ್ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು