ಮಹಿಳೆಗೆ ಮರುಜೀವ ನೀಡಿದ ಮಿರಜ್ ಆರಿನ್ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ
ಅರ್ಧ ಕಿಲೋ ತೂಕದ ಕ್ಯಾನ್ಸರ್ ಗಡ್ಡೆ ತೆಗೆಯುವಲ್ಲಿ ಯಶ
ಕಾಗವಾಡ 22: ಪಕ್ಕದ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮಿರಜ ಪಟ್ಟಣದ ಹೆಸರಾಂತ ಆರಿನ್ ಮಲ್ಟಿಸ್ಪೇಶಾಲಿಯ ಆಸ್ಪತ್ರೆಯ ವೈದ್ಯರು, ಮಹಿಳೆಯ ಹೊಟ್ಟೆಯಲ್ಲಿ ಬೆಳೆದಿದ್ದ ಸುಮಾರು ಅರ್ಧ ಕೆಜಿ ತೂಕದ ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮುಖಾಂತರ ಹೊರತೆಗೆಯುವಲ್ಲಿ ಯಶಸ್ವಿಗಾಗಿದ್ದು, ಮಹಿಳೆಗೆ ಮರುಜೀವನ ನೀಡಿದಂತಾಗಿರುವ ಆಸ್ಪತ್ರೆಯ ವೈದ್ಯರಿಗೆ ಅಭಿನಂದನೆಗಳು ಹರಿದು ಬರುತ್ತಿವೆ.
ಕರ್ನಾಟಕ ಮೂಲದ 48 ವರ್ಷದ ಮಹಿಳೆಯೊಬ್ಬಳ ಹೊಟ್ಟೆಯಲ್ಲಿ ಅರ್ಧ ಕೆಜಿ ತೂಕದ ಮತ್ತು 30 ಸೆಂಟಿ ಮೀಟರ್ ಉದ್ದದ ಕ್ಯಾನ್ಸರ್ ಗಡ್ಡೆಯೊಂದು ಬೆಳೆದಿದ್ದು, ಮಹಿಳೆಗೆ ಹೊಟ್ಟೆ ನೋವು ಉಂಟಾಗಿ, ಮಿರಜನ ಆರಿನ್ ಮಲ್ಟಿಸ್ಪೇಶಾಲಿಟಿ ಆಸಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿಯ ವೈದ್ಯರು ಮಹಿಳೆಯ ಹೊಟ್ಟೆಯನ್ನು ಪರೀಕ್ಷೆಗೆ ಒಳಪಡಿಸಿ, ಹೊಟ್ಟೆಯಲ್ಲಿ ಬೆಳೆದ ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮುಖಾಂತರ ಹೊರತೆಗೆದು, ಮಹಿಳೆಗೆ ಹೊಸ ಜೀವನ ನೀಡಿದ್ದಾರೆ. ಮಿರಜ್ ಪಟ್ಟಣದ ಆರಿನ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯರು ಸತತ ಐದು ಗಂಟೆಗಳ ಕಾಲ ಅತ್ಯಂತ ಕ್ಲಿಷ್ಟಕರವಾದ ಈ ಶಸ್ತ್ರಚಿಕಿತ್ಸೆಯನ್ನು ಮಾಡಿ, ಯಶಶ್ವಿಯಾಗಿದ್ದಾರೆ. ಇದಕ್ಕೆ ಆಸ್ಪತ್ರೆಯ ವೈದ್ಯರ ತಂಡ, ಅರಿವಳಿಕೆ ತಂಡ, ಶುಶ್ರೂಷಾ ಸಿಬ್ಬಂದಿಯ ಸಹಕಾರ ಲಿಭಿಸಿದೆ. ವೈದ್ಯರ ಈ ಸಾಧನೆಗೆ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ. ದೀಪಾಲಿ ಜಾಧವ ಅಭಿನಂದನೆ ತಿಳಿಸಿದ್ದಾರೆ.