ಕಾಗವಾಡ

ಅತಿವೃಷ್ಠಿ ನೆರೆಹಾವಳಿಯಿಂದ ಅನಾಹುತಗಳಾದಲ್ಲಿ 24 ಗಂಟೆಯೊಳಗೆ ವರದಿ ಒಪ್ಪಿಸಿ ಚಿಕ್ಕೋಡಿ ಜಿಲ್ಲಾ ನೂಡಲ್ ಅಧಿಕಾರಿ ಎಲ್ ವೈ ರೂಡಗಿ ಮಾಹಿತಿ: ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ

ಅತಿವೃಷ್ಠಿ ನೆರೆಹಾವಳಿಯಿಂದ ಅನಾಹುತಗಳಾದಲ್ಲಿ 24 ಗಂಟೆಯೊಳಗೆ ವರದಿ ಒಪ್ಪಿಸಿ   ಚಿಕ್ಕೋಡಿ ಜಿಲ್ಲಾ ನೂಡಲ್ ಅಧಿಕಾರಿ ಎಲ್ ವೈ ರೂಡಗಿ ಮಾಹಿತಿ: ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ

ಶೇಡಬಾಳ 14: ಅತಿವೃಷ್ಠಿಯಿಂದ ಹಾಗೂ ನೆರೆಹಾವಳಿಯಿಂದ ಮನೆಗಳು ಬಿದ್ದಲ್ಲಿ ಮತ್ತು ಇನ್ನಿತರೆ ಯಾವುದೇ ಜೀವಹಾನಿ, ಅನಾಹುತಗಳು ಸಂಭವಿಸಿದಲ್ಲಿ 24 ಗಂಟೆಯ ಒಳಗಾಗಿ ಮೇಲಾಧಿಕಾರಿಗಳಿಗೆ ವರದಿ ಒಪ್ಪಿಸುವಂತೆ ಚಿಕ್ಕೋಡಿ ಜಿಲ್ಲಾ ನೂಡಲ್ ಅಧಿಕಾರಿ ಎಲ್ ವೈ ರೂಡಗಿ ಹೇಳಿದರು. 

ಅವರು ಮಂಗಳವಾರ ದಿ.13 ರಂದು ಕಾಗವಾಡ ಪ್ರವಾಸಿ ಮಂದಿರದಲ್ಲಿ ಕಾಗವಾಡ ತಾಲೂಕಾ ಮಟ್ಟದ ವಿವಿಧ  ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 

ಜಿಲ್ಲಾಧಿಕಾರಿಗಳ ಆದೇಶದಂತೆ ಈ ಸಭೆಯನ್ನು ಕರೆಯಲಾಗಿದ್ದು ನೆರೆ ಹಾವಳಿ ಹಾಗೂ ಅತಿವೃಷ್ಠಿಯಿಂದ ನಿಮ್ಮ ನಿಮ್ಮ ಕ್ಷೇತ್ರಗಳ ವ್ಯಾಪ್ತಿಗಳಲ್ಲಿ ಜರುಗುವ ಘಟನೆಗಳ ಬಗ್ಗೆ ತೀವ್ರ ನಿಗಾ ವಹಿಸುವಂತೆ ಕರೆ ನೀಡಿದರು.

ಯಾವೊಬ್ಬ ಅಧಿಕಾರಿಯೂ ಮೇಲಾಧಿಕಾರಿಗಳ ಅಪ್ಪಣೆ ಪಡೆಯದೇ ಸ್ಥಳ ಬಿಟ್ಟು ತೆರಳುವಂತಿಲ್ಲ ಹಾಗೂ ರಜೆ ತೆಗೆದುಕೊಳ್ಳುವಂತಿಲ್ಲ. ಮನೆ ಬಿದ್ದಲ್ಲಿ ಹಾಗೂ ಜೀವಹಾನಿಯಾದಲ್ಲಿ ಸಂಪೂರ್ಣ ಮಾಹಿತಿ ಪಡೆದು ಮೇಲಾಧಿಕಾರಿಗಳಿಗೆ ಸಚಿತ್ರವಾಗಿ ವಿವರವನ್ನು 24 ಗಂಟೆಯೊಳಗೆ  ಸಲ್ಲಿಸುವಂತೆ ಹೇಳಿದರು.  ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಗವಾಡ ತಹಶಿಲ್ದಾರ ರಾಜೇಶ್ ಬುರ್ಲ್  ಮಾತನಾಡಿ, ಎಲ್ಲ ಅಧಿಕಾರಿಗಳ ಸಹಕಾರದಿಂದ ತಾಲ್ಲೂಕಿನಲ್ಲಿ ಆಗುವ ವಿಪತ್ತುಗಳನ್ನು ಎದುರಿಸಲು ನಾವೆಲ್ಲರೂ ಸಜ್ಜಾಗಿರೋಣ ಎಂದು ಹೇಳಿದ ಅವರು ಗ್ರಾಮಮಟ್ಟದ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಮುತುವರ್ಜ  ವಹಿಸಿ ಕೆಲಸ ನಿರ್ವಹಿಸುವಂತೆ ಕರೆ ನೀಡಿದರು.

ತಹಶಿಲ್ದಾರ ರಾಜೇಶ್ ಬುರ್ಲ್ , ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ಸಿಡಿಪಿಒ ಸಂಜಯಕುಮಾರ ಸದಲಗೆ, ಆರೋಗ್ಯಾಧಿಕಾರಿ ಪುಷ್ಪಲತಾ ಸುಣ್ಣದಕಲ್, ಕೃಷಿ ಇಲಾಖೆ ಅಧಿಕಾರಿ ಕೆ.ಟಿ.ಬಿರಾದಾರ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವೀಂದ್ರ ಸನಗೌಡ, ಶೇಡಬಾಳ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರ, ಉಗಾರ ಪುರಸಭೆ ಮುಖ್ಯಾಧಿಕಾರಿ ಸದಾಶಿವ ಬಬಲಾದಿ, ನೀರಾವರಿ ಇಲಾಖೆ ಅಭಿಯಂತರರು ಕೆ.ರವಿ, ಪ್ರವೀಣ ಹುಣಸಿಕಟ್ಟಿ, ಮಲ್ಲಿಕಾರ್ಜುನ  ಮಗದುಮ್, ಆರ್.ಪಿ.ಅವತಾಡೆ, ಪಶು ವೈಧ್ಯಾಧಿಕಾರಿ ಎಮ್ .ಎಸ್. ಹುಂಡೇಕರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಓಗಳು ಉಪಸ್ಥಿತರಿದ್ದರು 

ಸುದ್ದಿ ಓದಿ