ಗುಳೇಗುಡ್ಡ

ನೇಕಾರರ ಮುಷ್ಕರ : ಉಪವಿಭಾಗಾಧಿಕಾರಿ ಭೇಟಿ

ನೇಕಾರರ ಮುಷ್ಕರ : ಉಪವಿಭಾಗಾಧಿಕಾರಿ  ಭೇಟಿ
ಗುಳೇದಗುಡ್ಡದಲ್ಲಿ ನೇಕಾರರು ಅನಿರ್ಧಿಷ್ಟಕಾಲ ಧರಣಿ ಕುಳಿತ ಸ್ಥಳಕ್ಕೆ ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಭೇಟಿ ನೀಡಿದರು.

ಗುಳೇದಗುಡ್ಡ,ಜು.14 : ಪಟ್ಟಣದ ಗಜಾನನ ಸಹಕಾರಿ ಸಂಘ 2005 ರಲ್ಲಿ ಪ್ರತಿ ನೇಕಾರರಿಗೆ ರೂ. 8 ಸಾವಿರ ದಂತೆ 106 ಜನ ನೇಕಾರರಿಂದ ಹಣ ಪಡೆದು ಸ.ನಂ. 118/1 ರಲ್ಲಿ ನಿವೇಶನ ಪತ್ರ ನೀಡಿಲ್ಲ. 16 ವರ್ಷಗಳಿಂದ ಸಂಘದ ಅಧ್ಯಕ್ಷರು ನೇಕಾರರಿಗೆ ಮೋಸ ಮಾಡಿದ್ದಾರೆ ಎಂದು ಇಲ್ಲಿನ ಹಿರಿಯ ನಾಗರಿಕರ ಪ್ರಜಾಜಾಗೃತ ವೇದಿಕೆಯ ಅಧ್ಯಕ್ಷ ವಿ.ಜಿ.ಮ್ಯಾಗಿನಹಳ್ಳಿ ಆರೋಪಿಸಿದರು. 

ಬುಧವಾರ ಪಟ್ಟಣದ ಕಮತಗಿ ಸರ್ಕಲ್‌ದಲ್ಲಿ ಅನಿರ್ಧಿಕಾಲ ಧರಣಿ ಸತ್ಯಾಗ್ರಹ ಕೈಕೊಂಡ ಸ್ಥಳಕ್ಕೆ ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಭೇಟಿ ನೀಡಿದ ಸಂದರ್ಭದಲ್ಲಿ ಆರೋಪಿಸಿ ನೇಕಾರರಿಗೆ ನ್ಯಾಯವೊದಗಿಸಲು ಆಗ್ರಹಿಸಿದರು. 

ನಂತರ ಉಪವಿಭಾಗಾಧಿಕಾರಿ ಎಂ. ಗಂಗಪ್ಪ ಮಾತನಾಡಿ, ನಿಮಗೆ ಅನ್ಯಾಯವಾಗಿದೆ ಎನ್ನುವುದಾದರೆ, ನೀವು ಹಣ ಕೊಟ್ಟವರ ಮೇಲೆ ಪೋಲಿಸ್ ಸ್ಟೇಶನ್‌ದಲ್ಲಿ ಪ್ರಕರಣ ದಾಖಲು ಮಾಡಿ, ನಂತರ ನಾವು ಅದನ್ನು ವಿಚಾರಣೆ ಮಾಡುತ್ತೇವೆ. ಅದನ್ನು ಬಿಟ್ಟು ಧರಣಿ ಕೂಡುವುದು ಕೋವಿಡ್ ನಿಯಮ ಬಹೀರವಾಗುತ್ತದೆ. ನೀವು ಧರಣಿ ಕೂಡಲು ಸಹ ಅನುಮತಿ ಪಡೆದಿಲ್ಲ. ಧರಣಿ ಬಿಟ್ಟು ಚರ್ಚೆಗೆ ಬನ್ನಿ ಎಂದರು.  

ಅದಕ್ಕೆ ವಿರೋಧಿಸಿದ ಮುಖಂಡ ಮ್ಯಾಗಿನಹಳ್ಳಿ, ಹಣ ಪಡೆದು ನೇಕಾರರಿಗೆ ಅನ್ಯಾಯ ಮಾಡಿದವರಿಗೆ ಬಿಟ್ಟು ನಮಗೆ ಹೇಳಲು ಬಂದಿದ್ದೀರಿ. ಮೊದಲು ತಪ್ಪಿತಸ್ಥರನ್ನು ಹಿಡಿಯಿರಿ ಎಂದು ಪ್ರತಿಯಾಗಿ ಉತ್ತರಿಸಿದಾಗ, ಅಧಿಕಾರಿ ಮತ್ತು ಧರಣಿನಿರತ ನೇಕಾರರ ಮಧ್ಯ ಮಾತಿನ ಚಕಮಕಿ ನಡೆಯಿತು. ನಂತರ ಎಸಿ ಗಂಗಪ್ಪ ಮತ್ತು ತಹಸೀಲ್ದಾರ್ ಜಿ.ಎಂ.ಕುಲಕರ್ಣಿ ಗದ್ದಲದಿಂದ ಹೊರಬಂದು ವಾಹನವೇರಿ ಹೊರಟು ಹೋದರು. 

ಶೀಲವಂತ ಭೇಟಿ: ಇದೇ ಸಂದರ್ಭಕ್ಕೆ ಮಾಜಿ ಶಾಸಕ ರಾಜಶೇಖರ ಶೀಲವಂತ ಹಾಗೂ ಬಿಜೆಪಿ ಮುಖಂಡರು ಭೇಟಿ ನೀಡಿ, ಧರಣಿ ನಿರತರ ಸಮಸ್ಯೆ ಆಲಿಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದರು. ಇವರಿಗೂ ನೇಕಾರ ಮುಖಂಡರು ಮನವಿ ನೀಡಿದರು. 

ಕಂದಾಯ ನೀರೀಕ್ಷಕ ಮಹಾಂತೇಶ ಅಂಗಡಿ, ಎಎಸೈ ಘಂಟಿ, ಬಿಜೆಪಿ ನಗರಘಟಕದ ಅಧ್ಯಕ್ಷ ವಸಂತ ದೊಂಗಡೆ, ರಂಗಪ್ಪ ಶೇಬಿನಕಟ್ಟಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ