ಸ್ಪರ್ಧಾತ್ಮಕ ಯುಗದಲ್ಲಿ ಅಧ್ಯಯನ ಮುಖ್ಯ : ಸಿ ಮೋಹನ್ ರೆಡ್ಡಿ
ಹೂವಿನ ಹಡಗಲಿ 28: ಸ್ಪರ್ಧಾತ್ಮಕ ಯುಗದಲ್ಲಿ ಅಧ್ಯಯನ ಮುಖ್ಯ ಎಂದು ಜಿ ಬಿ ಆರ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿ ಮೋಹನ್ ರೆಡ್ಡಿ ಹೇಳಿದರು. ಪಟ್ಟಣದ ಜಿ ಬಿ ಆರ್ ಮಹಾವಿದ್ಯಾಲಯದಲ್ಲಿ ತಾಲೂಕು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗಕ್ಕೆ ಸಿದ್ಧರಾದಾಗ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು. ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಗೌಡ್ರ ಬಸವರಾಜಪ್ಪ ಉಪನ್ಯಾಸ ನೀಡಿ ಸಿನಿಮಾ ತಾರೆಗಳನ್ನು, ಕ್ರಿಕೆಟ್ ಆಟಗಾರರನ್ನು ಅನುಕರಿಸಿ ತಂದೆ ತಾಯಿಗಳನ್ನು, ಗುರುಗಳನ್ನು ಕಡೆಗಣಿಸಬೇಡಿ ಎಂದರು. ಪ್ರಾಚಾರ್ಯ ಎಸ್,ಎಸ್,ಪಾಟೀಲ್ಪ್ರಚಾರ್ಯ ಕೋರಿ ಹಾಲೇಶ,ಎಂ ಪಿ ಎಂ ಅಶೋಕ ಮಾತನಾಡಿದರು. ಪ್ರಾಚಾರ್ಯರಾದ ಎ. ಕೊಟ್ರಗೌಡ, ಬಿ.ಕಾಳೇಶ, ಈಶ್ವರ್ಪ, ನೀಲಪ್ಪ, ವೆಂಕಟೇಶ, ಸೋಮನಗೌಡ, ಡಿ ಸತೀಶ, ಎ ಅಮರೇಗೌಡ, ಕೆ ಪ್ರಕಾಶ, ದೇವರಾಜ್, ಎಲ್ಲಾ ಕಾಲೇಜ್ ಉಪನ್ಯಾಸಕರು ಸಿಬ್ಬಂದಿ ಹಾಜರಿದ್ದರು. ಉಪನ್ಯಾಸಕರ ಸಂಘದ ಖಜಾಂಚಿ ಎಂ ಶಿವಪ್ಪ ಸ್ವಾಗತಿಸಿದರು,ಕಾರ್ಯದರ್ಶಿ ವಿರೂಪಾಕ್ಷಪ್ಪ ಬಡಿಗೇರ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ಶಂಕರಿ್ಜ. ಬೆಟಗೇರಿ ನಿರ್ವಹಿಸಿದರು, ಸ್ವಪ್ನಾ. ಎ ಪ್ರಾರ್ಥಿಸಿದರು, ರೇವಣಸಿದ್ಧಪ್ಪ ವಂದಿಸಿದರು. ಕಳೆದ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ನೆರೆವೇರಿಸಲಾಯಿತು.