ಕಾಗವಾಡ

ವಿದ್ಯಾರ್ಥಿಗಳು ತಮ್ಮ ಸ್ಮರಣ ಶಕ್ತಿಯನ್ನುಪಯೋಗಿಸಿ ಅಭ್ಯಾಸ ಮಾಡಿ: ಡಾ. ಚಂ. ಹಳಿಂಗಳೆ

ವಿದ್ಯಾರ್ಥಿಗಳು ತಮ್ಮ ಸ್ಮರಣ ಶಕ್ತಿಯನ್ನುಪಯೋಗಿಸಿ ಅಭ್ಯಾಸ ಮಾಡಿ: ಡಾ. ಚಂ. ಹಳಿಂಗಳೆ

ಕಾಗವಾಡ 22: ವಿದ್ಯಾರ್ಥಿಗಳು ಒತ್ತಡದ ಜೀವನವನ್ನು ನಿಭಾಯಿಸಿ, ವ್ಯಸನಗಳಿಂದ ದೂರವಿದ್ದು, ತಮ್ಮಲ್ಲಿರುವ ಸ್ಮರಣ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಿಸಿಕೊಂಡು ಅಧ್ಯಯನ ಮಾಡುತ್ತ ಜೀನವನದಲ್ಲಿ ಯಶಸ್ವಿ ಪ್ರಜೆಗಳಾಗಬೇಕೆಂದು ಮಿರಜ್‌ನ ನಿರ್ಮಲ್ ವ್ಯಸನ ಕೇಂದ್ರದ ಅಧ್ಯಕ್ಷ ಡಾ. ಚಂದ್ರಶೇಖರ ಹಳಿಂಗಳೆ ಹೇಳಿದರು. 

ಅವರು, ಇತ್ತೀಚಿಗೆ ಮಹಾರಾಷ್ಟ್ರದ ಮಿರಜ್ ಪಟ್ಟಣದ ಐಡಿಯಲ್ ಸ್ಮಾರ್ಟ್‌ ಶಾಲೆಯ ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆಯ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು.  

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿತ ಒತ್ತಡವನ್ನು ಹೇಗೆ ಎದುರಿಸಬೇಕು. ಮತ್ತು ಅದರ ದುಷ್ಪರಿಣಾಮಗಳನ್ನು ತಪ್ಪಿಸುವ ಕುರಿತು, ವ್ಯಸನಗಳಿಂದಾಗುವ ದುಷ್ಪರಿಣಾಮಗಳು ಹಾಗೂ ಅವುಗಳಿಂದ ದೂರ ಉಳಿಯುವುದರ ಮಹತ್ವವನ್ನು ವಿವರಿಸಿದರು. 

ಐಡಿಯಲ್ ಸ್ಮಾರ್ಟ್‌ ಶಾಲೆಯ ಪ್ರಾಚಾರ್ಯ ಮಮತಾ ಭೋಕರೆ, ಸಂಯೋಜಕ ವಿಶ್ವಾಸರಾವ ಪಾಟೀಲ, ಸೋನಾಲ ಸನ್ಮುಖ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು, ನಿರ್ಮಲ್ ಆಸ್ಪತ್ರೆಯ ಕೌನ್ಸಿಲರ್ ರುಚಾ ಜೋಶಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ