ರಾಣೆಬೆನ್ನೂರ

ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಅಂಶ ತಿಳಿದುಕೊಳ್ಳಬೇಕು :ಗುಂಜುಟುಗಿ

ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಅಂಶ ತಿಳಿದುಕೊಳ್ಳಬೇಕು :ಗುಂಜುಟುಗಿ

ರಾಣೇಬೆನ್ನೂರು ಆ 8 ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ಅಧ್ಯಯನದ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಸಮಗ್ರ ದೇಶದ ಅಭಿವೃದ್ಧಿ ಪರವಾದ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಸಾಗಬೇಕಾದ ಇಂದಿನ ಅಗತ್ಯವಿದೆ ಎಂದು ನಗರ ಠಾಣಾ ಪಿಎಸ್ಐ ಗಡ್ಡೆಪ್ಪ ಗುಂಜಟಗಿ ಹೇಳಿದರು.   

  ಅವರು ಇತ್ತೀಚಿಗೆ ನಗರ ಹೊರ ವಲಯ, ಹುಣಸಿಕಟ್ಟಿ ರಸ್ತೆ ದೆಹಲಿ ಸೆಂಟ್ರಲ್ ಶಾಲೆಯಲ್ಲಿ 2023 ಮತ್ತು 24 ನೇ ಸಾಲಿನ  ಶಾಲಾ ಸಂಸತ್ ಉದ್ಘಾಟಿಸಿ   ಮಾತನಾಡಿದರು. ಪ್ರಜಾಪ್ರಭುತ್ವ ಬಲಗೊಳ್ಳಲು ಇಂದು ಸಂಸತ್ತಿನ ರೀತಿ ನೀತಿ ನಿಯಮಾವಳಿಗಳು ಮತ್ತು ಅದರ ಕಾರ್ಯಭಾರ, ರಾಜಕೀಯ ಮಹತ್ವ, ಏನು ಅದನ್ನು ಅರ್ಥ ಮಾಡಿಕೊಳ್ಳಲು ವಿದ್ಯಾರ್ಜನೆಯಿಂದಲೇ ಆರಂಭವಾಗಬೇಕು ಎಂದರು.     

    ಭವಿಷ್ಯಕ್ಕೆ ಶಿಕ್ಷಣ ಮುಖ್ಯವಾದರೆ, ಬದುಕಿಗೆ ಸರ್ವ ರೀತಿಯ ಮಾನಸಿಕ, ದೈಹಿಕ, ಮತ್ತು, ಬೌದ್ಧಿಕ ಕೌಶಲ್ಯಗಳನ್ನು, ಅಳವಡಿಸಿಕೊಳ್ಳಬೇಕಾದ ಅಗತ್ಯವಿದ್ದು, ಶಿಕ್ಷಣದ ಜೊತೆಗೆ, ಪರಿಸರ ಮತ್ತು ಸಾಮಾಜಿಕ ಸೇವಾ ಪರಿಕಲ್ಪನೆ, ಅಳವಡಿಸಿಕೊಳ್ಳಬೇಕು  ಇದರಿಂದ ಸಮಾಜದಲ್ಲಿ ಗೌರವ, ಪ್ರೀತಿ ವಿಶ್ವಾಸ, ಗಳಿಸಲು ಸಾಧ್ಯವಾಗುವುದು ಎಂದರು.       

   ಶಾಲಾ ಪ್ರಾಂಶುಪಾಲೆ ಶ್ರೀಮತಿ ಆನಂದಿ ಭಟ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ತೊಗಟವೀರ ಅವರು ಮಾತನಾಡಿ, ಮಕ್ಕಳಿಗೆ ಉತ್ತಮವಾದ ಮತ್ತು ಗುಣಮಟ್ಟದ ಶಿಕ್ಷಣವನ್ನು ಪೂರೈಸಬೇಕೆನ್ನುವ ಏಕೈಕ ಉದ್ದೇಶದಿಂದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ನಗರ ಮತ್ತು ತಾಲೂಕಿನ ನಾಗರಿಕರು  ಸಂಸ್ಥೆಯ ಉದ್ದೇಶಿತ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ನಗರ ಠಾಣಾ ಎಎಸ್ಐ. ವಿಜಯಕುಮಾರ್ ಬಳಿಗಾರ, ಕಾರ್ಯದರ್ಶಿ ಮಂಜುನಾಥ ತೊಗಟವೀರ, ಆಡಳಿತ ಮೇಲ್ವಿಚಾರಕ ವಿಜಯಲಕ್ಷ್ಮಿ ಪೂಜಾರ್ ಸೇರಿದಂತೆ, ಉಪನ್ಯಾಸಕರು, ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು

ಸುದ್ದಿ ಓದಿ