ರಾಣೆಬೆನ್ನೂರ

ವಿದ್ಯಾರ್ಥಿಗಳು ಸರಕಾರದ ಸೌಲಭ್ಯ ಬಳಸಿಕೊಂಡು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಬೇಕು

ವಿದ್ಯಾರ್ಥಿಗಳು ಸರಕಾರದ ಸೌಲಭ್ಯ ಬಳಸಿಕೊಂಡು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಬೇಕು

ರಾಣಿಬೆನ್ನೂರ 04: ತಾಲೂಕಿನ ಮುದೇನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24 ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಹಾವೇರಿ ಡಯಟನ ಉಪನ್ಯಾಸಕ ಗುರುಪ್ರಸಾದ.ಎನ್‌.ಜೆ ಚಾಲನೆ ನೀಡಿದರು.  

ಈ ವೇಳೆ ಮಾತನಾಡಿದ ಅವರು, ಈ ವರ್ಷವನ್ನು ಶಿಕ್ಷಣ ಇಲಾಖೆ ಕಲಿಕಾ ಬಲವರ್ಧನೆ ವರ್ಷ ಎಂದು ಘೋಷಿಸಿದ್ದು ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಬೇಕು. ತಾವು ಕಲಿತ ಕಲಿಕೆ ಮನದಟ್ಟಾಗಿ ಜೀವನಕ್ಕೆ ಅನ್ವಯವಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು, 

ಎಸ್‌ಡಿಎಮ್‌ಸಿ ಅಧ್ಯಕ್ಷೆ ರತ್ನಾ ಸುರೇಶಗೌಡ ಗಂಗನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಗ್ರೀನ್ ಎನರ್ಜಿ ಹ್ಯಾಚರೀಸ ಕಂಪನಿಯ ವ್ಯವಸ್ಥಾಪಕ ಮಾಲತೇಶ ಪಾಟೀಲ,  ಎಸ್‌ಡಿಎಮ್‌ಸಿ ಸದಸ್ಯರಾದ ರಫಿಕ್ ನಧಾಪ್, ಶಿವಪ್ಪ ಮಣಕೂರ, ಶಾಲಾ ಪ್ರಧಾನ ಗುರು ಪ್ರಕಾಶ ಹೊಸಳ್ಳಿ,  ಸಹಶಿಕ್ಷ ಸುರೇಶ ಕರೂರ,  ರಾಘವೇಂದ್ರ ಹುಲ್ಲತ್ತಿ, ಆರ್‌.ಬಿ.ಕೋಟೆನವರ, ಲಕ್ಮ್ಷೀಬಾಯಿ ನಾವಿ, ಸುನಿತಾ ಕಡ್ಲಗೊಂದಿ, ರಾಜೇಶ್ವರಿ ಕಲಭಾವಿ, ಶಹನಾಜ್ ರಾಟೀಮನಿ ಇದ್ದರು. 


ಸುದ್ದಿ ಓದಿ