ರಾಣೆಬೆನ್ನೂರ

ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯದ ಜೊತೆಗೆ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಬೇಕು

ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯದ ಜೊತೆಗೆ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಬೇಕು

ರಾಣೇಬೆನ್ನೂರು 20: ಭಾವನೆಗಳನ್ನು ವ್ಯಕ್ತಪಡಿಸಲು ಭಾವನಾತ್ಮಕ ಸಂಬಂಧ ಹೊಂದಿರುವ ಮೃದು ಕಾವ್ಯದ ಮಜಲೇ ಭಾವಗೀತೆಗಳು. ಭಾವನೆಗಳಿಗೆ ಅರ್ಥ ತುಂಬವ ಭಾವ ಕಾವ್ಯ ಕ್ಷಣಕಾಲ ಮನಸ್ಸಿನಾಳದ ನೋವುಗಳನ್ನು ಮರೆಯಲು ತುಂಬಾ ಸಹಕಾರಿಯಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಎಂ. ವ್ಹಿ.ಶಿಡಗನಾಳ ಹೇಳಿದರು. ಅವರು ಇತ್ತೀಚೆಗೆ  ಕಾಲೇಜಿನ  ಸಭಾಭವನದಲ್ಲಿ, ದಿ, ವ್ಹಿ.ಕೆ. ಸಾವುಕಾರ, ಅವರ 106 ನೇ ಜನ್ಮದಿನೋತ್ಸವದ ಸ್ಮರಣೆಯಲ್ಲಿ ಏರಿ​‍್ಡಸಲಾಗಿದ್ದ ಭಾವಗೀತೆ ಸ್ಪರ್ಧೆ. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.  

ಕಲೆ, ಸಾಹಿತ್ಯ, ಸಂಗೀತ, ಇವುಗಳ ಮೂಲಕ ಸಂಸ್ಕೃತಿಯನ್ನು ಪ್ರತಿ ಬಿಂಬಿಸಬೇಕಾದ ಇಂದಿನ ಅಗತ್ಯವಿದೆ ಎಂದ ಅವರು, ವಿದ್ಯಾರ್ಥಿಗಳು  ಶೈಕ್ಷಣಿಕ ವಿಷಯದ ಜೊತೆಗೆ ಪಟ್ಟೇತರ ಚಟುವಟಿಕೆಯಲ್ಲಿ ಭಾಗವಹಿಸಿ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದು ಸ್ಪರ್ದಾಳುಗಳಿಗೆ ಕರೆ ನೀಡಿದರು.  

ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿದ್ದ ದಿವಂಗತ ವ್ಹಿ..ಕೆ. ಸಾವುಕಾರ ಅವರು ತಾವು ಕಂಡಂತೆ ಕಲೆ, ಸಾಹಿತ್ಯ, ಮತ್ತು ಸಂಗೀತವನ್ನು ಆಸ್ವಾದಿಸುತ್ತ ಕಲಾರಾಧಕರಿಗೆ ಪ್ರೋತ್ಸಾಹದಾಯಕರಾಗಿದ್ದರು ಅಂಥವರ ಸ್ಮರಣೆ ಭಾವಗೀತೆಗಳ ಮೂಲಕ ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದರು. 

ಸ್ಮರಣೋತ್ಸವದ ನಿಮಿತ್ತ ಆಯೋಜಿಸಿದ್ದ, ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದ, ಅಧ್ಯಕ್ಷ ಸುಭಾಸ ವ್ಹಿ ಸಾವುಕಾರ ಅವರು, ಸ್ಪರ್ಧೆಯಲ್ಲಿ ಗೆಲುವು ಮತ್ತು ಸೋಲು  ಸಹಜ. ಗೆಲುವಿಗೆ ಹಿಗ್ಗದೆ, ಸೋಲಿಗೆ ಕುಗ್ಗದೆ ಸ್ಪರ್ಧೆಯಾಗಿ, ಸ್ವಿಕರಿಸಿ, ಗೆಲುವಿಗೆ ಮುನ್ನುಡಿ ಬರೆಯಲು ಮುಂದಾಗಬೇಕು ಎಂದರು.  

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸೀತಾ ಸಾವುಕಾರ, ನಿರ್ದೇಶಕರಾದ, ಲಕ್ಷ್ಮಣ ಸಾವುಕಾರ, ಶ್ರೀಮತಿ ಶಕುಂತಲಾ ಸಾವುಕಾರ, ಡಾ. ಸಂಜಯ ಸಾವುಕಾರ, ರವಿ ಸಾವುಕಾರ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಹೆಚ್‌.ಜಿ. ಬಸವರಾಜ, ಸಂಯೋಜಕ ಡಾ. ಮಧುಕುಮಾರ್ ಆರ್,  ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು.  

ಕುಸುಮಾ ಬಡಿಗೇರ  ಸಂಗಡಿಗರು ಪ್ರಾರ್ಥಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಸರಸ್ವತಿ ಬಮ್ಮನಾಳ ಸ್ವಾಗತಿಸಿದರು.  

 ಉಪನ್ಯಾಸಕ ಡಾ. ರಾಮರೆಡ್ಡಿ ಎಸ್‌. ರೆಡ್ಡೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ: ಅರುಣ ಬೋಗೆರ ನಿರೂಪಿಸಿ, ಪ್ರೊ: ಶಿವಕುಮಾರ್ ಬೆಣ್ಣಿ ವರದಿ ವಾಚಿಸಿ. ಡಾ. ಪಿ.ಬಿ. ಕೊಪ್ಪದ ವಂದಿಸಿದರು.  

 ಸ್ಪರ್ಧಾ ವಿಜೇತರು :-  ಭಾವಗೀತೆ ಸ್ಪರ್ಧೆಯಲ್ಲಿ ಕವಿವಿ ಹಾಗೂ ಹಾವೇರಿ ವಿ. ವಿ ವ್ಯಾಪ್ತಿಯ ವಿವಿಧ ಪದವಿ ಕಾಲೇಜುಗಳ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  

ಭಾರಿ ಪೈಪೋಟಿ ಮತ್ತು ಸ್ಪರ್ಧಾತ್ಮಕವಾಗಿ ನಡೆದ ಸ್ಪರ್ಧೆಯಲ್ಲಿ, ಧಾರವಾಡ ಜಿಎಸ್‌ಎಸ್ ಪದವಿ ಕಾಲೇಜಿನ ವಿದ್ಯಾರ್ಥಿನಿ ಆಕಾಂಕ್ಷಾ ಜೆ ಕುಂಬಾರ( ಪ್ರಥಮ ), ಅದೇ ಕಾಲೇಜಿನ ಮಹಿಮಾ ಹೆಗಡೆ( ದ್ವಿತೀಯ ) ಹಾವೇರಿ ಸ. ಎಸ್‌. ಸಿ.-ಎಸ್‌. ಟಿ. ವಸತಿ ವಿದ್ಯಾರ್ಥಿನಿ ಪಾರ್ವತಿ ತೃತೀಯ ಸ್ಥಾನ ಗಳಿಸಿದರೇ, ಆರ್ ಟಿ ಇ ಎಸ್ ವಿದ್ಯಾರ್ಥಿ, ಮಹಮ್ಮದ್ ಶಫಿಯಾನ್ ತೃತೀಯ ಸ್ಥಾನ ಪಡೆದರು. ವಿಜೇತ ವಿದ್ಯಾರ್ಥಿಗಳಿಗೆ, ನಗದು ಮೊತ್ತ, ಪಾರಿತೋಷಕ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.  

ನಿರ್ಣಾಯಕರಾಗಿ ಸುಗಮ ಸಂಗೀತ  ಕಲಾವಿದರಾದ ಗಣಪ್ಪ ಕುಲಕರ್ಣಿ ಶ್ರೀಪಾದ ಕುಲಕರ್ಣಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ