ರಾಣೆಬೆನ್ನೂರ

ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ

ರೋಟರಿ ಆಂಗ್ಲ ಮಾಧ್ಯಮ  ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ

ರಾಣಿಬೆನ್ನೂರ 14:  ಕಳೆದ ಮಾರ್ಚ್‌/ಏಪ್ರಿಲ್ ತಿಂಗಳಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಶೇ. 94.73 ಫಲಿತಾಂಶ ಲಭಿಸಿದೆ.   

ಒಟ್ಟು 133 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಆ ಪೈಕಿ 21 ಉನ್ನತ ಶ್ರೇಣಿ, 62 ಪ್ರಥಮ ದರ್ಜೆ, 43 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ತೇಜಸ್ವಿನಿ ಕನ್ನಾಳ 594 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನ, ಭವಾನಿ ದೇವರಗುಡ್ಡ 588 ಅಂಕಗಳು ದ್ವಿತೀಯ ಹಾಗೂ ಚಂದನ ಐರಣಿ 574 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾನೆ.  

ಕನ್ನಡ ವಿಷಯದಲ್ಲಿ ಭವಾನಿ ದೇವರಗುಡ್ಡ ಮತ್ತು ನಿಧಿ ಜೈನ್ ನೂರಕ್ಕೆ ನೂರು ಅಂಕಗಳು, ಹಿಂದಿ ವಿಷಯದಲ್ಲಿ ತೇಜಸ್ವಿನಿ ಕನ್ನಾಳ, ನಿಧಿ ಜೈನ್, ಚಿನ್ಮಯಿ ಮುದ್ದಪ್ಪಳವರ, ನವ್ಯಾ ಬಣಕಾರ ನೂರಕ್ಕೆ ನೂರು ಅಂಕಗಳನ್ನು ಪಡೆದಿರುತ್ತಾರೆ. 


ಸುದ್ದಿ ಓದಿ