ಯರಗಟ್ಟಿ

ವಿದ್ಯಾರ್ಥಿಗಳು ಮತದಾನ ಬಗ್ಗೆ ಜನರಿಗೆ ಜಾಗೃತಿ ಜಾಥಾ ಕಾರ್ಯಕ್ರಮ

ವಿದ್ಯಾರ್ಥಿಗಳು ಮತದಾನ ಬಗ್ಗೆ ಜನರಿಗೆ ಜಾಗೃತಿ ಜಾಥಾ ಕಾರ್ಯಕ್ರಮ

ಯರಗಟ್ಟಿ : ಸಮೀಪದತಲ್ಲೂರ ಗ್ರಾಮ ಪಂಚಾಯತ ಹಾಗೂ ಕಂದಾಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ  ವಿದ್ಯಾರ್ಥಿಗಳಿಂದ ಸೋಮವಾರ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು. 

ಗ್ರಾಮ ಲೆಕ್ಕಾಧಿಕಾರಿ ಶೋಭಾ ಸಿದ್ನಾಳ ಮಾತನಾಡಿ, 18 ವರ್ಷ ಮೇಲ್ಪಟ್ಟವರು ಮತದಾನದ ಹಕ್ಕನ್ನು ಪಡೆಯಲು ತಪ್ಪದೇ ಮತದಾನ ಪಟ್ಟಿಗೆ ಹೆಸರು ಸೇರಿಸಿಕೊಳ್ಳಬೇಕು. ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಯೊಬ್ಬರು ಮತದಾನ ನೋಂದಣಿ ಮಾಡಿ, ಚುನಾವಣೆಯಲ್ಲಿ ನೀವು ಸ್ವತಂತ್ರ್ಯವಾಗಿ ಅಭಿವೃದ್ಧಿ ಪರ ಕೆಲಸ ಮಾಡುವ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನೀವು ಸ್ವತಂತ್ರರಾಗುತ್ತೀರಿ ಎಂದು ಗ್ರಾಮಸ್ಥರಿಗೆ ತಿಳಿಸಿದರು. 

ಗ್ರಾಪಂ ಅಧ್ಯಕ್ಷ ಬಸವರಾಜ ಕಡಬಿ ಮಾತನಾಡಿ, ಹೊಸ ಮತದಾರರ ಸೇರೆ​‍್ಡ ಹಾಗೂ ಬದಲಾವಣೆಗೆ ಅವಕಾಶ, ಯುವ ಮತದಾರರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಹೇಳಿದರು. 

ನಂತರ ಮತದಾನ ಜಾಗೃತಿ ಮೂಡಿಸುವ ವಿವಿಧ ಘೋಷಣೆಗಳನ್ನು ಹಾಕುತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನ ಕುರಿತು ವಿದ್ಯಾರ್ಥಿಗಳಿಂದ ಜಾಗೃತಿ ಮೂಡಿಸಿದರು. 

ಗ್ರಾಪಂ ಕಾರ್ಯದರ್ಶಿ ಸತೀಶ ಬಡಿಗೇರ, ಎಸ್‌.ಎಮ್‌.ಹಂಜಿ, ಎಸ್‌.ಎಫ್‌.ಮುರಗನ್ನವರ, ರಾಜಶೇಖರ ಅಣ್ಣಿಗೇರಿ, ಅಶ್ವಿನಿ ಹಿರೇಮಠ, ಪುಷ್ಪಾ ನಾಯ್ಕರ, ವಿಜಯಲಕ್ಷ್ಮೀ ಬಾವಿಕಟ್ಟಿ, ಭೀಮವ್ವ ಉಪ್ಪಾರ, ವಿಠ್ಟಲ ಬಡಿಗೇರ, ಮಹೇಶ ಇಟ್ನಾಳ, ಮರುತಿ ಆಡೀನ ಇತರರಿದ್ದರು. 


ಸುದ್ದಿ ಓದಿ