ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತ
ರಾಣಿಬೆನ್ನೂರ 4: ತಾಲೂಕಿನ ಎರೆಕುಪ್ಪಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ಪ್ರಾರಂಭೋತ್ಸವದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಗುರುನಾಥ ರೆಡ್ಡಿ ಮೇವುಂಡಿ, ಸದಸ್ಯರಾದ ಮಂಜುನಾಥ್ ಬಡಿಗೇರ, ವೇದಾವತಿ ಬಡಿಗೇರ, ಪ್ರಧಾನ ಗುರುಮಾತೆ ಎನ್.ಎಸ್. ಪಾಟೀಲ, ಎಂ.ಜಿ. ತೋಟದ, ಎಸ್.ಸಿ. ಇಂದುಮತಿ, ಎಸ್.ಬಿ. ನೆಗಳೂರ, ಅನುರಾಧ ಎಮ್.ಎಚ್ ಉಪಸ್ಥಿತರಿದ್ದರು.