ಕಾಗವಾಡ

ವಿದ್ಯಾರ್ಥಿಗಳು ತಂದೆ-ತಾಯಿ, ಶಿಕ್ಷಕರನ್ನು ಗೌರವಿಸಿ: ಕೈಲಾಶ ಪುರಮನವರ

ವಿದ್ಯಾರ್ಥಿಗಳು ತಂದೆ-ತಾಯಿ, ಶಿಕ್ಷಕರನ್ನು ಗೌರವಿಸಿ: ಕೈಲಾಶ ಪುರಮನವರ

ಮಹಾವೀರ ಮಿರ್ಜಿ ಕಾಲೇಜಿನ ವಾರ್ಷಿಕ ಸಮ್ಮೇಳನ 

ಕಾಗವಾಡ 18: ವಿದ್ಯಾರ್ಥಿಗಳೇ ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ ತಮ್ಮ ಗುರು-ಹಿರಿಯರನ್ನು, ತಂದೆ-ತಾಯಂದಿರರನ್ನು ಹಾಗೂ ತಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ ಶಿಕ್ಷಕರನ್ನು ಮರೆಯಬಾರದು. ಶಿಕ್ಷಕರು ತಮ್ಮೆಲ್ಲ ವಿದ್ಯೆಯನ್ನು ಧಾರೆಯರೆದು ನಿಮ್ಮನ್ನು ರೂಪಿಸಿರುತ್ತಾರೆ. ನಿಮ್ಮ ಜೀವನ ರೂಪಿಸುವಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದು ರಾಯಬಾಗದ ಖ್ಯಾತ ಉದ್ಯೋಮಿಗಳು, ಕೃಷ್ಣಾ-ಗೋದಾವರಿ ಗೊಬ್ಬರ, ಬೀಜ ಉತ್ಪಾದನೆ ಮತ್ತು ಮಾರಾಟ ಸಹಕಾರಿ ಸಂಸ್ಥೆಯ ಅಧ್ಯಕ್ಷರಾದ ಕೈಲಾಶ ಪುರಮನವರ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ. 

ಅವರು, ಶನಿವಾರ ದಿ. 17 ರಂದು ಬೆಳಗಾವಿಯ ನೆಹರೂ ನಗರದ ಎಸ್‌ಎಸ್‌ಎಸ್ ಸಮೀತಿಯ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದ ವಾರ್ಷಿಕ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತ ಮಾತನಾಡುತ್ತಿದ್ದರು. 

ಮೊದಲಿಗೆ ಸ್ವರ ಸಂಗಮ ಗ್ರೂಪ್ ವಿದ್ಯಾರ್ಥಿಗಳಿಂದ ನಮೋಕಾರ ಮಂತ್ರ ಮತ್ತು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಲ್ಲ ಗಣ್ಯರಿಗೆ ಸಸಿ ನೀಡುವ ಮೂಲಕ ಸ್ವಾಗತಿಸಲಾಯಿತು. ನಂತರ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. 

ಇದೇ ವೇಳೆ ವರ್ಷದ ಬೆಸ್ಟ್‌ ವಿದ್ಯಾರ್ಥಿ-ವಿದ್ಯಾರ್ಥಿನಿ ಘೋಷಣೆ ಸೇರಿದಂತೆ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ,  ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮೆಡಲ್, ಪ್ರಶಸ್ತಿ ಪತ್ರ ನೀಡಿ, ಪ್ರೋತ್ಸಾಹಿಸಲಾಯಿತು.  

ಕಾರ್ಯಕ್ರಮದಲ್ಲಿ ವಿನೋದ ಪಾಟೀಲ, ಎಸ್‌ಎಸ್‌ಎಸ್ ಸಮಿತಿಯ ಅಧ್ಯಕ್ಷರಾದ ವಿನೋದ ಬರಗಾಲೆ, ಉಪಾಧ್ಯಕ್ಷರಾದ ಅಜೀತ ನಾಂದ್ರೆ, ಅಶೋಕ ಕುಸನಾಳೆ, ಎ.ಬಿ. ಪಾಟೀಲ, ಎಂ.ಎಸ್‌. ಪಾಟೀಲ, ನಿರ್ಮಲಾ ಗಡದ, ಪ್ರೀನ್ಸಿಪಾಲ್ ವ್ಹಿ.ಬಿ. ತುರಮುರಿ, ರವಿ ದಂಡಗಿ, ಡಾ. ಅನುರಾಧಾ ಕಂಚಿ, ಗೀರಿಶ ಮೋರೆ, ಶ್ರೇಯಸ್ ಮುನ್ನೋಳ್ಳಿ, ಮಾನಸಿ ನರಸಗೌಡರ ಸೇರಿದಂತೆ ಎಸ್‌ಎಸ್‌ಎಸ್ ಸಮಿತಿಯ ನಿರ್ದೇಶಕರು, ಮಹಾವೀರ ಪಿ. ಮಿರ್ಜಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನ ಆಡಳಿತಾಧಿರಿಗಳು, ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ