ಗುಳೇಗುಡ್ಡ

ಬಸ್ ಸೌಕರ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿ ಒಕ್ಕೂಟ ಮನವಿ

ಬಸ್ ಸೌಕರ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿ ಒಕ್ಕೂಟ ಮನವಿ
ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟಿಸಿ ತಹಸೀಲ್ದಾರರಿಗೆ ಮನವಿ ನೀಡಿದರು

ಗುಳೇದಗುಡ್ಡ 02:  ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌರ್ಕವಿಲ್ಲದ ಕಾರಣ ಖಾಸಗಿ ವಾಹನದಲ್ಲಿ ಪ್ರಯಾಣಿಸಿ ತೊಂದರೆ ಅನುಭವಿಸುವಂತಾಗಿದೆ ಎಂದು ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟಿಸಿ ತಹಸೀಲ್ದಾರರಿಗೆ ಮನವಿ ನೀಡಿದರು.

ತಾಲೂಕಿನ ಹುಲ್ಲಿಕೇರಿ ಗ್ರಾಮದಿಂದ  ಖಾನಾಪೂರ ಗ್ರಾಮದ ರಸ್ತೆ  ಮಧ್ಯದಲ್ಲಿ ಬರುವ ಸಮಯದಲ್ಲಿ ಟಂಟಂ ಆಯಾ ತಪ್ಪಿ ಉರುಳಿಬಿದ್ದ ಪರಿಣಾಮವಾಗಿ ಸುಮಾರು 10 ವಿದ್ಯಾರ್ಥಿಗಳಿಗೆ ಗಾಯವಾಗಿದ್ದು,  3 ವಿದ್ಯಾರ್ಥಿಗಳು ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಪರ್ವತಿ, ಖಾನಾಪೂರ, ಹುಲ್ಲಿಕೇರಿ ಎಸ್ಪಿ, ಹಾನಾಪೂರ ಎಲ್‍ಟಿ, ಹಾಗೂ ಮುರುಡಿ ಗ್ರಾಮದಿಂದ ಬರುವ ವಿದ್ಯಾರ್ಥಿಗಳಿಗೆ ಸುಮಾರು ವರ್ಷಗಳಿಂದ ಸರಿಯಾದ ಸಮಯಕ್ಕೆ ಬಸ್ಸಿನ ಸೌಕರ್ಯವಿರುವುದಿಲ್ಲ. ಈ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು ಖಾಸಗಿ ವಾಹನಗಳಲ್ಲಿ ಶಾಲಾ ಕಾಲೇಜಿಗೆ ಹೋಗುವಂತಾಗಿದೆ ಎಂದು ಹೇಳಿದರು.

ಸುಮಾರು 200 ವಿದ್ಯಾರ್ಥಿಗಳು ನಿತ್ಯ ಈ ಗ್ರಾಮಗಳಿಂದ ಬರುತ್ತಾರೆ. ಅವರಿಗೆ ಸರಿಯಾದ ಸಮಯಕ್ಕೆ ಯಾವುದೇ ಸರ್ಕಾರಿ ಬಸ್ಸಿನ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಬೆಳಿಗ್ಗೆ 7 ಗಂಟೆಯಿಂದ ಆ ಗ್ರಾಮಗಳ  ಮುಖಾಂತರ ಗುಳೇದಗುಡ್ಡಕ್ಕೆ ಬರುವ ಹಾಗೂ ಮದ್ಯಾಹ್ನ  1-30 ಹಾಗೂ ಸಂಜೆ 4 ಗಂಟೆಗೆ ಗುಳೇದಗುಡ್ಡ ಮುಖಾಂತರ ಮೇಲಿನ ಎಲ್ಲಾ ಗ್ರಾಮಗಳಿಗೆ ತಲುಪುವ ವ್ಯವಸ್ಥೆ ಕಲ್ಪಿಸಬೇಕು. ಮತಕ್ಷೇತ್ರದ ಶಾಸಕರು, ಬಸ್ ಡಿಪೋ ಮ್ಯಾನೇಜರ್, ತಹಸೀಲ್ದಾರ ಅವರು ಈ  ಮನವಿಗೆ ಸ್ಪಂದಿಸಿ, ಬೇಗನೇ 2 ದಿನಗಳೊಳಗಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಆದೇಶ ಜಾರಿಗೆ ಮಾಡಬೇಕು. ಒಂದು ವೇಳೆ ಈ ವ್ಯವಸ್ಥೆ ಆದಷ್ಟು ಬೇಗ ಜಾರಿಗೆ ಆಗದಿದ್ದರೆ  ತಹಸೀಲ್ದಾರ ಕಚೇರಿ ಮುಂದೆ ವಿದ್ಯಾಥಿಗಳು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪ್ರತಿಭಟನೆಕಾರರು   ಮನವಿಯಲ್ಲಿ ಎಚ್ಚರಿಸಿದ್ದಾರೆ.

ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಗುಳೇದಗುಡ್ಡ ತಾಲೂಕಾ ಅಧ್ಯಕ್ಷ ಹೊಳೆಬಸು ಹಾಳಕೇರಿ, ಉಪಾಧ್ಯಕ್ಷ ರುದ್ರಗೌಡ ಪಾಟೀಲ, ಕಾರ್ಯದರ್ಶಿ ಮಂಜುನಾಥ ಪಾಟೀಲ, ಸಂಘಟನಾ ಕಾರ್ಯದರ್ಶಿ ಹರೀಶ ನಿಂಬಲಗುಂದಿ, ಮೌನೇಶ ಯತ್ನಟ್ಟಿ ಸೇರಿದಂತೆ ಇನ್ನಿತರರು  ಈ ಸಂದರ್ಭದಲ್ಲಿ ಇದ್ದರು.

ಸುದ್ದಿ ಓದಿ