ಅಥಣಿ

ಒಣ ದ್ರಾಕ್ಷಿ ಸಂಸ್ಕರಣ ಘಟಕಕ್ಕೆ ವಿದ್ಯಾರ್ಥಿಗಳ ಅಧ್ಯಯನ ಭೇಟಿ

ಒಣ ದ್ರಾಕ್ಷಿ ಸಂಸ್ಕರಣ ಘಟಕಕ್ಕೆ ವಿದ್ಯಾರ್ಥಿಗಳ ಅಧ್ಯಯನ ಭೇಟಿ

ಲೋಕದರ್ಶನ ವರದಿ 


ಅಥಣಿ 13: ಅರಭಾವಿಯ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಡಚಿ ಗ್ರಾಮದ ಪ್ರಗತಿಪರ ತೋಟಗಾರಿಕೆ ಬೆಳೆಗಾರ ಸಂಜೀವ ಜಾಧವ ಇವರಿಗೆ ಸೇರಿದ ಒಣ ದ್ರಾಕ್ಷಿ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದರು. 

          ಘಟಕದ ಕುರಿತಾಗಿ ಮಾಹಿತಿ ನೀಡಿದ ಸಂಜೀವ ಜಾಧವ, ದ್ರಾಕ್ಷಿ ಬೆಳೆಯುವದಷ್ಟೇ ಅಲ್ಲ ದ್ರಾಕ್ಷಿಯನ್ನು ಸಂಸ್ಕರಿಸಿ ಒಣಗಿಸುವ ಪ್ರಕ್ರಿಯೆ ಮಹತ್ವದ್ದಾಗಿದೆ ಬಣ್ಣ, ಅಳತೆ ಉತ್ತಮವಾಗಿದ್ದರೆ ಮಾತ್ರ ಮಾರುಕಟ್ಟೆಯಲ್ಲಿ ಒಳ್ಳೆಯ ದರ ಪಡೆಯಬಹುದಾಗಿದೆ ಎಂದರು. 

          ಮೊದಲು ಕೃಷಿ ಕೂಲಿ ಕಾರ್ಮಿಕರು ಶೆಡ್ಡಗಳಲ್ಲಿ ಒಣಗಿಸಿದ ದ್ರಾಕ್ಷಿಯನ್ನು ಕೈಯಿಂದ ತಿಕ್ಕಿ ತಯಾರಿಸುತ್ತಿದ್ದರು ಆದರೆ ಇದರಿಂದ ಗುಣಮಟ್ಟದ ಒಣ ದ್ರಾಕ್ಷಿ ತಯಾರಿಸಲು ಸಾಧ್ಯವಾಗುತ್ತಿರಲಿಲ್ಲ ಹೀಗಾಗಿ ಇಂಟ್ರಾಗೇಟಿವ ಯಂತ್ರದ ಮೂಲಕ ಮೂರು ಪ್ರತ್ಯೇಕ ಗುಣ ಮಟ್ಟದಲ್ಲಿ ಒಣ ದ್ರಾಕ್ಷಿ ತಯಾರಾಗುತ್ತವೆ ಇದರಿಂದ ರೈತರಿಗೆ ಒಳ್ಳೆಯ ದರ ಸಿಗುತ್ತದೆ ಎಂದರು. 

            ಮಾಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವಿಜಯಕುಮಾರ ರಾಠೋಡ ಮಾತನಾಡಿ, ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಘಟಕ ಅಧ್ಯಯನಕ್ಕೆ ಅನುಕೂಲಕರವಾಗಿದೆ ಅಲ್ಲದೆ ಸಂಸ್ಕರಣ ಘಟಕದ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಕೂಡ ನೀಡಿದ್ದಾರೆ ಎಂದರು. 

            ಪ್ರಾಧ್ಯಾಪಕಿ ಸುಮಂಗಲಾ ಕೌಲಗಿ, ದ್ರಾಕ್ಷಿ ಬೆಳೆಗಾರ ಶಿವು ನಾಯಿಕ, ಸಂಪ್ರೀತ ಜಾಧವ, ಪೃಥ್ವಿರಾಜ ಜಾಧವ ಸೇರಿದಂತೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ